ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ನಟಿಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದ್ಯಾ ಅಂತಾ ಅಭಿಮಾನಿಗಳನ್ನ ಕಾಡ್ತಿದೆ.


ಕತ್ರಿನಾ ಕೈಫ್ ಹೆಸರಿನ ಬದಲಿಗೆ ಕಾಮಿಡಿಯಾ ಮಾಡರೇಟ್ಸ್ ಎಂಬ ಹೆಸರು ನಟಿಯ ಖಾತೆಯಲ್ಲಿ ಕಾಣಿಸಿದೆ. ಬಳಿಕ ಕತ್ರಿನಾ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಯಾಕೆ ಈ ರೀತಿ ಆಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಇದಾದ ಬಳಿಕ 66 ಮಿಲಿಯನ್ ಫಾಲೋವರ್ಸ್ ಹೆಚ್ಚಳವಾಗಿದೆ. ನಟಿಯ ಅಕೌಂಟ್ ಕೂಡ ಹ್ಯಾಕ್ ಆಗಿಲ್ಲ. ಆದರೆ ನಟಿಯ ನಡೆ ನೋಡಿ ನೆಟ್ಟಿಗರು, ಫಾಲೋವರ್ಸ್ ಜಾಸ್ತಿಯಾಗಬೇಕೆಂದು ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

