ತೆಲುಗಿನಲ್ಲಿ ಶ್ರೀದೇವಿ ಪುತ್ರಿಗೆ ಬೇಡಿಕೆ- ನ್ಯಾಚುರಲ್ ಸ್ಟಾರ್ ನಾನಿಗೆ ಜಾನ್ವಿ ಕಪೂರ್ ನಾಯಕಿ

Public TV
1 Min Read
janhvi kapoor

ಹಾಟ್ ಬೆಡಗಿ ಜಾನ್ವಿ ಕಪೂರ್‌ಗೆ (Janhvi Kapoor) ಟಾಲಿವುಡ್‌ನಲ್ಲಿ ಅದೃಷ್ಟ ಖುಲಾಯಿಸಿದೆ. ಜ್ಯೂ.ಎನ್‌ಟಿಆರ್ ಜೊತೆಗಿನ ‘ದೇವರ’ (Devara) ಸಿನಿಮಾ ರಿಲೀಸ್‌ಗೂ ಮುನ್ನವೇ ನಟಿ ಮತ್ತೊಂದು ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿಗೆ (Nani) ಜಾನ್ವಿ ಕಪೂರ್ ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ

janhvi kapoor

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಜ್ಯೂ.ಎನ್‌ಟಿಆರ್, ರಾಮ್ ಚರಣ್ ಜೊತೆ ನಟಿಸುತ್ತಿರುವ ಜಾನ್ವಿಗೆ ಈ ಸಿನಿಮಾಗಳ ಬಿಡುಗಡೆ ಆಗುವ ಮುನ್ನವೇ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಇನ್ನೂ ಜಾನ್ವಿ ಕಪೂರ್ ತೆಲುಗಿನಲ್ಲಿ ಸೆಟಲ್ ಆಗುವ ಲಕ್ಷಣ ಕಾಣುತ್ತಿದೆ. ಅಮ್ಮ ಶ್ರೀದೇವಿ ಹಾದಿಯಲ್ಲಿ ಸಕ್ಸಸ್‌ಗಾಗಿ ಜಾನ್ವಿ‌ ಕೂಡ ಹೆಜ್ಜೆ ಇಡುತ್ತಿದ್ದಾರೆ.

nani

‘ದಸರಾ’ (Dasara) ನಿರ್ದೇಶಕ ಶ್ರೀಕಾಂತ್ ಜೊತೆ ನಾನಿ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ನಾನಿ 33ನೇ ಈ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಜಾನ್ವಿರನ್ನು ಕೇಳಲಾಗಿದೆ. ತಮ್ಮ ಪಾತ್ರಕ್ಕೆ ಇರುವ ಸ್ಕೋಪ್ ಮತ್ತು ಕಥೆ ಕೇಳಿ ಥ್ರಿಲ್ ಆಗಿ ಈ ಸಿನಿಮಾವನ್ನು ನಟಿ ಒಪ್ಪಿಕೊಂಡಿದ್ದಾರಂತೆ. ಈ ವಿಚಾರ ನಿಜನಾ ಎಂದು ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾಯಬೇಕಿದೆ.

ಇನ್ನೂ ಸ್ಟಾರ್ ಕಿಡ್ ಜಾನ್ವಿ ಬಳಿ ಕೈತುಂಬಾ ಸಿನಿಮಾಗಳಿವೆ. ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ.

Share This Article