ಬಾಲಿವುಡ್ (Bollywood) ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಹಾಟ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಾದಕವಾಗಿ ಕಾಣಿಸಿಕೊಂಡಿರುವ ನಟಿಯ ಬ್ಯೂಟಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿಯೋ ಜಾಕ್ವೆಲಿನ್ ಇದೀಗ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್
ಕಪ್ಪು ಬಣ್ಣದ ಉಡುಗೆಯಲ್ಲಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾ ಮುಂದೆ ಜಾಕ್ವೆಲಿನ್ ಮಿಂಚಿದ್ದಾರೆ. ನಟಿಯ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ.
ಬಾಲಿವುಡ್‌ನ ಬಹುನಿರೀಕ್ಷಿತ ‘ಹೌಸ್‌ಫುಲ್ 5’, ‘ವೆಲ್‌ಕಮ್ ಟು ದಿ ಜಂಗಲ್’ ಸಿನಿಮಾಗಳಲ್ಲಿ ಜಾಕ್ವೆಲಿನ್ ನಟಿಸಿದ್ದಾರೆ. ಇದರ ರಿಲೀಸ್‌ಗಾಗಿ ಅವರು ಎದುರು ನೋಡ್ತಿದ್ದಾರೆ.
ಸದ್ಯ ಜಾಕ್ವೆಲಿನ್ ಕೆರಿಯರ್‌ನಲ್ಲಿ ಯಾವ ಸಿನಿಮಾ ಕೂಡ ಹಿಟ್ ಆಗ್ತಿಲ್ಲ. ಸಿನಿಮಾ ಸಕ್ಸಸ್ ಆಗದೇ ಇದ್ದರೂ ಅವರಿಗೆ ಅವಕಾಶಗಳ ಕೊರತೆಯಿಲ್ಲ. ಆದರೆ ಅವರು ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.
ಇನ್ನೂ ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ರಕ್ಕಮ್ಮ ಹಾಡಿಗೆ ಸುದೀಪ್ ಜೊತೆ ಜಾಕ್ವೆಲಿನ್ ಸೊಂಟ ಬಳುಕಿಸಿದ್ದರು. ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದರು.