ಬೆಂಗಳೂರಿನ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಒಂದು ಮಗುವಿನ ತಾಯಿಯಾಗಿರುವ ದೀಪಿಕಾ ‘ಕಲ್ಕಿ’ (Kalki 2898 AD) ಚಿತ್ರದ ನಂತರ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಮಗಳು ಹುಟ್ಟಿದ ಬಳಿಕ ನಿನ್ನೆ (ಡಿ.7) ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಿದ ಶೋವೊಂದರಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಈ ವೇಳೆ, ಪಂಜಾಬಿ ಗಾಯಕನಿಗೆ ದೀಪಿಕಾ ಕನ್ನಡ ಕಲಿಸಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವಣ್ಣ ದಂಪತಿ
ವೇದಿಕೆಗೆ ದೀಪಿಕಾ ಎಂಟ್ರಿ ಕೊಟ್ಟ ಕೂಡಲೇ ಅಲ್ಲಿದ್ದವರೆಲ್ಲ ಜೋರಾಗಿ ಕೂಗಿ, ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಬಳಿಕ ದೀಪಿಕಾ ಅವರು ಗಾಯಕ ದಿಲ್ಜಿತ್‌ಗೆ (Diljit Dosanjh) ಕನ್ನಡದಲ್ಲೇ ಮಾತನಾಡಲು ಹೇಳಿದರು. ಆದರೆ ದಿಲ್ಜಿತ್‌ಗೆ ಕನ್ನಡ ಗೊತ್ತಿಲ್ಲದ ಕಾರಣ ದೀಪಿಕಾ ಅವರೇ ಕನ್ನಡವನ್ನು ಮುದ್ದಾಗಿ ಹೇಳಿಕೊಟ್ಟಿದ್ದಾರೆ.
View this post on Instagram
ಕನ್ನಡದಲ್ಲಿ ಮಾತನಾಡಲು ಒದ್ದಾಡಿದ ದಿಲ್ಜಿತ್‌ಗೆ ದೀಪಿಕಾ ಪಡುಕೋಣೆ ಅವರು ‘ನಾನು ನಿಮ್ಮನ್ನು ಪ್ರೀತಿಸ್ತೀನಿ’ ಎಂದು ಕನ್ನಡದ ಪದಗಳನ್ನು ಹೇಳಿಕೊಟ್ಟಿದ್ದಾರೆ. ಬಳಿಕ ದಿಲ್ಜಿತ್ ಕೂಡ ದೀಪಿಕಾ ಹೇಳಿದಂತೆ ಸೊಗಸಾಗಿ ಕನ್ನಡದಲ್ಲೇ ನಾನು ನಿಮ್ಮನ್ನ ಪ್ರೀತಿಸ್ತೀನಿ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡದಲ್ಲಿ ಮಾತನಾಡಿದ ದೀಪಿಕಾ ಆ ನಂತರ ಪಂಜಾಬಿ ಗಾಯಕನಿಗೂ ಕನ್ನಡ ಕಲಿಸಿಕೊಟ್ಟ ರೀತಿ ನೋಡಿ ಕನ್ನಡಿಗರು ಫಿದಾ ಆಗಿದ್ದಾರೆ. ಬಾಲಿವುಡ್‌ನಲ್ಲಿ ನಟಿ ಸೆಟಲ್ ಆಗಿದ್ದರೂ ಕನ್ನಡ ಮರೆತಿಲ್ಲ ಎಂದು ದೀಪಿಕಾರನ್ನು ಫ್ಯಾನ್ಸ್ ಕೊಂಡಾಡಿದ್ದಾರೆ.