`ಪುಷ್ಪ’ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಸೌತ್‌ನಲ್ಲಿ ಸಖತ್ ಬೇಡಿಕೆಯಿದೆ. ಬಾಲಿವುಡ್‌ನಲ್ಲಿ ಗಟ್ಟಿ ನೆಲೆಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಗುಡ್ ಬೈ, ಮಿಷನ್ ಮಜ್ನು ಹಿಂದಿ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಬಿಟೌನ್‌ನಲ್ಲಿ ಮಿಂಚಲು ಆಗಾಗ ಪಾರ್ಟಿಗಳಲ್ಲಿ ನಟಿ ಕಾಣಿಸಿಕೊಳ್ತಿರುತ್ತಾರೆ. ಈಗ ನೀತಾ ಮುಖೇಶ್ ಅಂಬಾನಿ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಜೊತೆ ರಶ್ಮಿಕಾ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ತಮಿಳು, ತೆಲುಗು ಜೊತೆಗೆ ರಶ್ಮಿಕಾ ಬಾಲಿವುಡ್‌ನಲ್ಲೂ ಸಖತ್ ಹವಾ ಸೃಷ್ಟಿಸಿಕೊಂಡಿದ್ದಾರೆ. ರಶ್ಮಿಕಾ ಇತ್ತೀಚೆಗಷ್ಟೆ ನೀತಾ ಮುಖೇಶ್ ಅಂಬಾನಿ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಹಿಂದಿ ಚಿತ್ರರಂಗದ ಅನೇಕ ಮಂದಿ ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ಸ್ ಈವೆಂಟ್‌ನಲ್ಲಿ ಮಿಂಚಿದ್ದಾರೆ. ಈ ಕಾರ್ಯಕ್ರಮ ಹೈಲೆಟ್‌ಗಳಲ್ಲಿ ನಟಿ ರಶ್ಮಿಕಾ ಡ್ಯಾನ್ಸ್ ಕೂಡ ಒಂದು. ಪಡ್ಡೆಹುಡುಗರ ಕ್ರಶ್ ಕ್ವೀನ್ ರಶ್ಮಿಕಾ ಸ್ಟಾರ್ ನಟಿ ಆಲಿಯಾ ಭಟ್ ಜೊತೆ ಸೇರಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
naatu naatu dance alia bhatt and rashmika mandanna ❤???? #AliaBhatt #RashmikaMandanna #NaatuNaatu #RRR #RRRMovie #NMACC pic.twitter.com/qbM7EPhMt2
— Vishwajit Patil (@_VishwajitPatil) April 2, 2023
ಆಲಿಯಾ- ರಶ್ಮಿಕಾ ಇಬ್ಬರ ಡ್ಯಾನ್ಸ್ ಈಗ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯ ಗೆದ್ದಿದೆ. ಇಬ್ಬರೂ ಸ್ಟಾರ್ಸ್ ಸೂಪರ್ ಹಿಟ್ ಆಸ್ಕರ್ (Oscar 2023) ಪ್ರಶಸ್ತಿ ವಿಜೇತ RRR ಸಿನಿಮಾದ `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಮತ್ತು ಆಲಿಯಾ ಇಬ್ಬರನ್ನೂ ಒಟ್ಟಿಗೆ ಸ್ಟೇಜ್ ಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಆಲಿಯಾ ಭಟ್ (Alia Bhatt) ಹೈಹೀಲ್ಸ್ ಧರಿಸಿದ್ದರು. ಹೈ ಹೀಲ್ಸ್ ಅನ್ನು ವೇದಿಕೆ ಮೇಲೆಯೇ ಬಿಚ್ಚಿಟ್ಟು, ರಶ್ಮಿಕಾ ಜೊತೆ ಆಲಿಯಾ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 3 ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಕಿಚ್ಚ ಸುದೀಪ್
ಈ ಸಮಾರಂಭದಲ್ಲಿ ರಣ್‌ವೀರ್ ಸಿಂಗ್- ದೀಪಿಕಾ ಪಡುಕೋಣೆ ಕೂಡ ಡ್ಯಾನ್ಸ್ ಮಾಡಿದ್ದಾರೆ. ಸೂಪರ್ ಸ್ಟಾರ್ಸ್‌ಗಳು ಕೂಡ ಹೆಜ್ಜೆ ಹಾಕುವ ಮೂಲಕ ನೀತಾ ಮುಖೇಶ್ ಅಂಬಾನಿ ಈವೆಂಟ್‌ನಲ್ಲಿ ಎಲ್ಲರನ್ನ ರಂಜಿಸಿದ್ದಾರೆ. ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2, ಅನಿಮಲ್, ನಿತಿನ್ ಜೊತೆ ಹೊಸ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.