ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚಾಕು ಇರಿತ ಪ್ರಕರಣದ ಬಗ್ಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸೈಫ್ ಅವರು ಈಗ ಔಟ್ ಆಫ್ ಡೇಂಜರ್ ಎಂದು ಸ್ನೇಹಿತನ ಬಗ್ಗೆ ಸುನೀಲ್ ಶೆಟ್ಟಿ (Suniel Shetty) ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Advertisement
‘ಜೈ’ ಎಂಬ ತುಳು ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪವರ್‌ಫುಲ್ ಪಾತ್ರ ಮಾಡುತ್ತಿದ್ದಾರೆ. ಶೂಟಿಂಗ್‌ಗಾಗಿ ಮಂಗಳೂರಿಗೆ ಬಂದಿದ್ದಾರೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಸೈಫ್ ಚಾಕು ಇರಿತದ ಘಟನೆ ಕುರಿತು ಸುನೀಲ್ ಮಾತನಾಡಿ, ಸೆಕ್ಯೂರಿಟಿ ಸಮಸ್ಯೆ ಆಗಿರಬಹುದು ಎಂದು ಹೇಳಿದ್ದಾರೆ. ಸೈಫ್‌ಗೆ ಏನಾಗಿದೆ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ಈ ವಿಚಾರ ನನಗೆ ಗೊತ್ತಾದ ತಕ್ಷಣ ನನಗೆ ಅನಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಲಿ ಎಂಬುದಷ್ಟೇ ಎಂದಿದ್ದಾರೆ.
Advertisement
Advertisement
ಸೆಕ್ಯೂರಿಟಿ ಸಮಸ್ಯೆ ಆಗಿರುವಂತೆ ಕಾಣುತ್ತಿದೆ. ನನಗೆ ತುಂಬಾ ತಡವಾಗಿ ವಿಚಾರ ತಿಳಿಯಿತು. ಈಗ ಅವರು ಔಟ್ ಆಫ್ ಡೇಂಜರ್ ಎಂದಿದ್ದಾರೆ. ಬೇಗ ಗುಣಮುಖರಾಗ್ತಾರೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ:ಉಪಾಧ್ಯಕ್ಷ ಚಿಕ್ಕಣ್ಣ ಈಗ ‘ಲಕ್ಷ್ಮೀಪುತ್ರ’- ’ಮಾರ್ಟಿನ್’ ಡೈರೆಕ್ಟರ್ ಎ.ಪಿ ಅರ್ಜುನ್ ಸಾಥ್
Advertisement
ಇನ್ನೂ ಚಾಕು ಇರಿತದ ಘಟನೆ ಬಳಿಕ ಸೈಫ್ ಅಲಿ ಖಾನ್ ಪ್ರತಿಕ್ರಿಯಿಸಿ, ನಾನು ಕ್ಷೇಮವಾಗಿದ್ದೇನೆ, ಯಾವುದೇ ತೊಂದರೆ ಇಲ್ಲ. ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ ಅಂತ ನಟ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದರು. ಈ ಘಟನೆ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ. ತನಿಖೆಯ ಬಳಿಕ ಎಲ್ಲಾ ಸತ್ಯಾಂಶ ಹೊರ ಬೀಳಲಿದೆ ಎಂದು ತಿಳಿಸಿದ್ದರು.
ನಸುಕಿನ ಜಾವ 2:30ರ ವೇಳೆಗೆ ಸೈಫ್ ಮೇಲೆ ದಾಳಿ ನಡೆದಿದೆ. ರಾತ್ರಿ ದಾಳಿಕೋರ ಸೈಫ್ ಮನೆಗೆ ಬಂದಿದ್ದಾನೆ. ಈತ ಮನೆಗೆ ಬಂದಿದ್ದನ್ನು ನೋಡಿ ಕೆಲಸದಾಕೆ ಗಲಾಟೆ ಮಾಡಿದ್ದಾಳೆ. ಈ ಗಲಾಟೆಯ ಶಬ್ದ ಕೇಳಿ ಸೈಫ್ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದಾಗ ಸೈಫ್ ಮೇಲೆ ಅಟ್ಯಾಕ್ ಆಗಿದೆ. ಈ ವೇಳೆ ನಟನಿಗೆ 6 ಬಾರಿ ಚಾಕುವಿನಿಂದ ಇರಿತಗಳಾಗಿದ್ದು, ರಕ್ತದ ಮಡುವಿನಲ್ಲಿದ್ದ ತಂದೆಯನ್ನು ಇಬ್ರಾಹಿಂ ಅಲಿ ಖಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಟನಿಗೆ ಆಪರೇಷನ್ ಮಾಡಲಾಗಿದ್ದು, ಈಗ ಸೈಫ್ ಸೇಫ್ ಆಗಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ.