ಚಿತ್ರೀಕರಣದ ವೇಳೆ ಸುನೀಲ್ ಶೆಟ್ಟಿಗೆ ಗಾಯ

Public TV
1 Min Read
suniel shetty

ಬಾಲಿವುಡ್ ನಟ ಸುನೀಲ್ ಶೆಟ್ಟಿಗೆ (Suniel Shetty) ಚಿತ್ರೀಕರಣದ ವೇಳೆ ಪೆಟ್ಟು ಮಾಡಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ ಹಲವು ಎಚ್ಚರಿಕೆಯ ಕ್ರಮ ತೆಗೆದುಕೊಂಡಿದ್ದರೂ ಕೂಡ ಸುನೀಲ್ ಶೆಟ್ಟಿಗೆ ಪೆಕ್ಕಲುಬಿಗೆ ಗಾಯವಾಗಿದೆ. ಇದನ್ನೂ ಓದಿ:ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆ – 50 ಲಕ್ಷಕ್ಕೆ ಬೇಡಿಕೆ

suniel shetty

ಪ್ರಸ್ತುತ ‘ಹಂಟರ್’ (Hunter) ವೆಬ್ ಸರಣಿಯ ಶೂಟಿಂಗ್ ಮುಂಬೈನಲ್ಲಿ ಮಾಡಲಾಗುತ್ತಿದೆ. ಫೈಟಿಂಗ್ ಸೀನ್ ಚಿತ್ರೀಕರಿಸುವಾಗ ಹಲವು ಮುನ್ನಚ್ಚರಿಕೆಯ ಕ್ರಮ ಕೈಗೊಂಡಿದ್ದರೂ ಕೂಡ ಆಕಸ್ಮಿಕವಾಗಿ ಸುನೀಲ್ ಶೆಟ್ಟಿಗೆ ಗಾಯವಾಗಿದೆ. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಸಿ ನಟನಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಇನ್ನೂ ಆತಂಕದಲ್ಲಿರುವ ಫ್ಯಾನ್ಸ್‌ಗೆ ಸುನೀಲ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೆಲ್ತ್ ಅಪ್‌ಡೇಟ್ ತಿಳಿಸಿದ್ದಾರೆ. ಸಣ್ಣ ಗಾಯ, ಸೀರಿಯಸ್ ಏನು ಇಲ್ಲ. ನಾನು ಈಗ ಚೇತರಿಸಿಕೊಂಡಿದ್ದೇನೆ. ಮುಂದಿನ ಚಿತ್ರೀಕರಣಕ್ಕೆ ತಯಾರಿಯಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ನಟನ ಕಡೆಯಿಂದ ಅಧಿಕೃತ ಅಪ್‌ಡೇಟ್ ತಿಳಿದು ಫ್ಯಾನ್ಸ್ ನಿರಾಳವಾಗಿದ್ದಾರೆ.

Share This Article