ಬೆಂಗಳೂರು: ದೇವರೇ ಯಾಕೆ ನೀನು ನನ್ನ ಪ್ರೀತಿಯ ಪಪ್ಪಿಯನ್ನು ಕರೆದುಕೊಂಡು ಹೋದೆ ಎಂದು ಹಿರಿಯ ನಟಿ ಲಕ್ಷ್ಮೀ ಅವರು ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ಇದ್ದೆ. ಬೆಳಗ್ಗೆ 3.30ವರೆಗೆ ಚೆನ್ನೈ ವಾಹಿನಿಯೊಂದು ಕರೆ ಮಾಡಿ ತಿಳಿಸಿದಾಗ ನಾನು ಶಾಕ್ ಆಯ್ತು. ನನಗೆ ಏನು ಮಾತನಾಡಬೇಕು ಎಂದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ
ತಾಯಿಯ ವಿಧೇಯ ಮಗಳಾಗಿ, ಗಂಡನಿಗೆ ತಕ್ಕ ಪತ್ನಿಯಾಗಿ, ಮಕ್ಕಳ ಪ್ರೀತಿಯ ತಾಯಿಯಾಗಿದ್ದಳು. ಕೊನೆಯ ತನಕವೂ ನಾನು ಬಣ್ಣ ಹಚ್ಚಿಕೊಂಡಿರಬೇಕು ಎನ್ನುವ ಆಸೆ ಕಲಾವಿದರಿಗೆ ಇರುತ್ತದೆ. ಅದೇ ರೀತಿಯಾಗಿ ಆಕೆ ಕಲಾವಿದೆಯಾಗಿದ್ದುಕೊಂಡೆ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದರು.
ನಾನು ಆಕೆಯನ್ನು ಪಪ್ಪಿಯೆಂದು ಕರೆಯುತ್ತಿದ್ದೆ. ಬಹಳಷ್ಟು ಸಿನಿಮಾದಲ್ಲಿ ನಾನು ಮತ್ತು ಅವಳು ಒಟ್ಟಿಗೆ ಅಭಿನಯಿಸಿದ್ದೇವೆ. ನಾನು ಅಕ್ಕನ ಪಾತ್ರ ಮಾಡುತ್ತಿದ್ದರೆ ನನ್ನ ತಂಗಿಯ ಪಾತ್ರವನ್ನು ಆಕೆ ಮಾಡುತ್ತಿದ್ದಳು. ಯಾವುದಾದರೂ ಒಂದು ಕಾಯಿಲೆಯಿಂದ ಮೃತಪಟ್ಟರೆ ಕಾರಣ ಹೇಳಬಹುದು. ಶ್ರೀದೇವಿಯದ್ದು ಮೃತಪಡುವ ವಯಸ್ಸಲ್ಲ. ಒಂದು ವೇಳೆ ದೇವರು ನನಗೆ ಸಿಕ್ಕಿದ್ದರೆ ಯಾಕೆ ನನ್ನ ಪಪ್ಪಿಯನ್ನು ಕರೆದುಕೊಂಡೇ ಹೋದೆ ಎಂದು ಪ್ರಶ್ನಿಸುತ್ತೇನೆ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ಕಿಚ್ಚ ಸುದೀಪ್
https://youtu.be/NTm7FXx_s-A
https://youtu.be/Q-TaTMBm5XM