ಫೆ.6ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್-ಕಿಯಾರಾ ಜೋಡಿ

Public TV
1 Min Read
siddarth malhotra 1

ಬಾಲಿವುಡ್‌ನ (Bollywood) ಮತ್ತೊಂದು ಕ್ಯೂಟ್ ಕಪಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಸಿದ್ಧಾರ್ಥ್ (Siddarth) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೊಸ ವರ್ಷಕ್ಕೆ ಹೊಸ ಬಾಳಿಗೆ ಕಾಲಿಡಲು ನಿರ್ಧರಿಸಿದ್ದಾರೆ.

siddarth 1

ಸಾಕಷ್ಟು ವರ್ಷಗಳಿಂದ ಸಿದ್ ಮತ್ತು ಕಿಯಾರಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

siddarth kiara 1

ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ನಡೆಯುತ್ತಿದೆ. ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *