ಮುಂಬೈ: ಅಶ್ಲೀಲ ಸಿನಿಮಾಗಳ ಚಿತ್ರೀಕರಣ ಆರೋಪದಡಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಸೆಪ್ಟೆಂಬರ್ನಲ್ಲಿ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ.
ಹೌದು, ಅಶ್ಲೀಲ ಸಿನಿಮಾಗಳ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಮುನ್ನ ಇನ್ಸ್ಟಾಗ್ರಾಮ್, ಟ್ವಿಟ್ಟರ್ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದ ರಾಜ್ ಕುಂದ್ರಾ ಅವರು ಇದೀಗ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಆಗಾಗ ಶಿಲ್ಪಾ ಶೆಟ್ಟಿ ಜೊತೆ ರೀಲ್ ಮಾಡಿ, ಕೆಲವೊಂದು ಮೋಜಿನ ವೀಡಿಯೋ ಹಾಗೂ ಫೋಟೋಗಳನ್ನು ರಾಜ್ ಕುಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಇದನ್ನೂ ಓದಿ: ನೀಲಿ ಚಿತ್ರ ನಿರ್ಮಾಣ – ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅರೆಸ್ಟ್
ಜೈಲಿನಿಂದ ಜಾಮೀನಿನ ಆಧಾರದ ಮೇಲೆ ಹೊರಬಂದ ನಂತರ ರಾಜ್ ಕುಂದ್ರಾ ಅವರು, ಸೋಶಿಯಲ್ ಮೀಡಿಯಾದಲ್ಲಿ ಸೈಲೆಂಟ್ ಆಗಿದ್ದಾರೆ. ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ ಆರೋಪ ಹಿನ್ನೆಲೆ ಬಂಧನಕ್ಕೊಳಗಾಗಿ ರಾಜ್ ಕುಂದ್ರಾ ಅವರು 2 ತಿಂಗಳು ಜೈಲಿನಲ್ಲಿದ್ದರು. ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ, ಮೊಬೈಲ್ ಅಪ್ಲಿಕೇಶನ್ ನಲ್ಲಿ ಅಪ್ಲೋಡ್ ಮಾಡಿದವರ ವಿರುದ್ಧ ಪೊಲೀಸರು ಫೆಬ್ರವರಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಸಂಚುಕೋರ ವ್ಯಕ್ತಿಯಾಗಿದ್ದರೆಂಬ ಆರೋಪವಿತ್ತು. ಇದೀಗ ಮುಂಬೈ ಸೆಷನ್ಸ್ ಕೋರ್ಟ್ 50,000 ರೂಪಾಯಿಗಳ ಶ್ಯೂರಿಟಿ ನೀಡಿ ಜಾಮೀನು ನೀಡಿದೆ. ಇದನ್ನೂ ಓದಿ: 2 ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು