BollywoodCinemaLatestLeading NewsMain Post

ಶಾರುಖ್‌ ಬ್ಯಾಗ್‌ನಲ್ಲಿ ದುಬಾರಿ ವಾಚ್‌ ಪತ್ತೆ – ಏರ್‌ಪೋರ್ಟ್‌ನಲ್ಲೇ 6.87 ಲಕ್ಷ ರೂ. ತೆರಿಗೆ ಕಟ್ಟಿದ ನಟ

ಯುಎಇಯಿಂದ (UAE) ವಾಪಸ್‌ ಆಗುವಾಗ ಬ್ಯಾಗ್‌ನಲ್ಲಿ ದುಬಾರಿ ವಾಚ್‌ಗಳನ್ನು ಹೊಂದಿದ್ದ ಬಾಲಿವುಡ್‌ (Bollywood) ನಟ ಶಾರುಖ್‌ ಖಾನ್‌ (Shah Rukh Khan) ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಕಸ್ಟಮ್ಸ್‌ ಅಧಿಕಾರಿಗಳು ತಡೆದು ತೆರಿಗೆ ಕಟ್ಟಿಸಿಕೊಂಡು ಕಳುಹಿಸಿದ್ದಾರೆ.

ಶಾರುಕ್‌ ಖಾನ್‌ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ತಡೆದು ಸುಮಾರು ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದರು. ಈ ವೇಳೆ ನಟನ ಬ್ಯಾಗ್‌ನಲ್ಲಿ ಸುಮಾರು 18 ಲಕ್ಷ ರೂ. ಮೌಲ್ಯದ ದುಬಾರಿ ವಾಚ್‌ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆ ವಾಚ್‌ಗಳಿಗೆ 6.87 ಲಕ್ಷ ರೂ. ತೆರಿಗೆಯನ್ನು ಶಾರುಖ್‌ ಖಾನ್‌ ಪಾವತಿಸಿದ್ದಾರೆ. ಇದನ್ನೂ ಓದಿ: ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

ಸರಿಸುಮಾರು ಒಂದು ಗಂಟೆ ವಿಚಾರಣೆಯ ನಂತರ ಶಾರುಖ್ ಮತ್ತು ಮ್ಯಾನೇಜರ್‌ ಪೂಜಾ ದದ್ಲಾನಿ ಅವರನ್ನು ವಿಮಾನ ನಿಲ್ದಾಣದಿಂದ ಹೊರಡಲು ಅನುಮತಿ ನೀಡಲಾಯಿತು. ಆದರೆ ನಟನ ಅಂಗರಕ್ಷಕ ರವಿ ಮತ್ತು ಇತರ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಯಿತು. ಅಂಗರಕ್ಷಕ ರವಿ, ಶಾರುಖ್‌ ಖಾನ್‌ ಅವರ ಕ್ರೆಡಿಟ್ ಕಾರ್ಡ್ ಬಳಸಿ 6,87,000 ರೂ. ತೆರಿಗೆಯನ್ನು ಠೇವಣಿ ಮಾಡಿ ನಂತರ ಅಲ್ಲಿಂದ ಹೊರಟರು.

ಶಾರುಖ್ ಜೊತೆಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಅಂಗರಕ್ಷಕ ರವಿ ಸೇರಿದಂತೆ ಅವರ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಮುಂಬೈಗೆ ಖಾಸಗಿ ಜೆಟ್‌ ಮೂಲಕ ಹಿಂತಿರುಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಾನ್ ಯುಎಇಗೆ ತೆರಳಿದ್ದರು. ಇದನ್ನೂ ಓದಿ: ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

Live Tv

Leave a Reply

Your email address will not be published. Required fields are marked *

Back to top button