– 2 ನಿಮಿಷದಲ್ಲಿ ಪುತ್ರನಿಗೆ ತಂದೆ ಹೇಳಿದ್ದೇನು..?
ಮುಂಬೈ: ಹಡಗಿನಲ್ಲಿ ಡ್ರಗ್ಸ್ ಪಾರ್ಟಿ(Drugs Party) ಪ್ರಕರಣ ಸಂಬಂಧ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಕಾನ್ ಪುತ್ರ ಆರ್ಯನ್ ನನ್ನು ಈಗಾಗಗಲೇ ಎನ್‍ಸಿಬಿ(NCB) ಬಂಧಿಸಿದೆ. ಅಧಿಕಾರಿಗಳು ಆರ್ಯನ್ ನನ್ನು ಬಂಧಿಸಿದ ಬಳಿಕ ನಟ ತಮ್ಮ ಪುತ್ರನ ಜೊತೆ 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಹೌದು. ಪುತ್ರ ಆರ್ಯನ್ (Aryan Khan) ಬಂಧನದ ಬಳಿಕ ಶಾರೂಖ್ ಖಾನ್ (Shahrukh Khan) ಅವರು ಫೋನ್ ಮೂಲಕ 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಏನು ಮಾತನಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಪ್ರಕರಣ ಸಂಬಂಧ ಪುತ್ರನಿಗೆ ಧೈರ್ಯ ತುಂಬಿರಬಹುದು ಎಂದು ಹೇಳಲಾಗುತ್ತಿದೆ. ಇತ್ತ ನಿನ್ನೆ ರಾತ್ರಿ ಶಾರೂಖ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿ ಮಾತುಕತಡ ನಡೆಸಿದ್ದರು. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!
ಆರ್ಯನ್ ಖಾನ್ ಬಂಧನದ ಬಳಿಕ ಕಾನೂನು ಪ್ರಕ್ರಿಯೆಯ ಭಾಗವಾಗಿ ಎನ್‍ಸಿಬಿ ಅಧಿಕಾರಿಗಳು ಶಾರೂಖ್ ಜೊತೆ ದೂರವಾಣಿಯಲ್ಲಿ ಮಾತನಾಡಲು ಆರ್ಯನ್ ಗೆ ಅವಕಾಶ ನೀಡಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಬ್ಬರು 2 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ
ಇತ್ತ ಪ್ರಕರಣ ಸಂಬಂಧ ಬಂಧಿಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರ್ಯನ್ ಅಧಿಕಾರಿಗಳ ಮುಂದೆ ಅತ್ತಿದ್ದಾನೆ. ಕಳೆದ 4 ವರ್ಷಗಳಿಂದ ಆರ್ಯನ್ ಡ್ರಗ್ಸ್ ಸೇವನೆ ಮಾಡುತ್ತಾ ಬಂದಿದ್ದಾನೆ ಎಂದು ವಿಚಾರಣೆಯ ವೇಳೆ ಆರ್ಯನ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿರುವುದಾಗಿ ಎನ್‍ಸಿಬಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ:ಶಾರುಖ್ ಪುತ್ರ ಆರ್ಯನ್ ಇನ್ನೂ ಮಗು, ಉಸಿರಾಡಲು ಬಿಡಿ: ನಟ ಸುನೀಲ್ ಶೆಟ್ಟಿ
ಶನಿವಾರ ಮಧ್ಯರಾತ್ರಿ ಖಚಿತ ಮಾಹಿತಿ ಆಧರಿಸಿ ಎನ್‍ಸಿಬಿ ಅಧಿಕಾರಿಗಳು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಾರೂಖ್ ಪುತ್ರ ಸೇರಿ 8 ಮಂದಿಯನ್ನು ವಶಕ್ಕೆ ಪಡೆದಿದ್ದ ಎನ್‍ಸಿಬಿ ಹೆಚ್ಚಿನ ವಿಚಾರಣೆ ನಡೆಸಿ ಬಂಧಿಸಿತ್ತು. ಬಳಿಕ ಶಾರೂಖ್ ಪುತ್ರ ಹಾಗೂ ಇನ್ನಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಮೂವರನ್ನು ಒಂದು ದಿನಕ್ಕೆ ಎನ್‍ಸಿಬಿ ವಶಕ್ಕೆ ನೀಡಿತ್ತು. ಇಂದು ಆರ್ಯನ್ ಖಾನ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದೇವೆ: ಎನ್‍ಸಿಬಿ ಮುಖ್ಯಸ್ಥ ಪ್ರಧಾನ್