ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ `ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರದ ಟೀಸರ್ ನೋಡಿ ಬಾಲಿವುಡ್ ನಟ ಸಂಜಯ್ ದತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಜಯ್ ತಮ್ಮ ಟ್ವಿಟ್ಟರಿನಲ್ಲಿ ಟೀಸರ್ ಲಿಂಕ್ ಹಂಚಿಕೊಂಡು ಅದಕ್ಕೆ, “ಯುವರತ್ನ ಟೀಸರ್ ನೋಡಲು ಅದ್ಭುತವಾಗಿದೆ” ಎಂದು ಬರೆದುಕೊಂಡು ಇಡೀ ಚಿತ್ರತಂಡಕ್ಕೆ ಶುಭಶಾಯ ತಿಳಿಸಿದ್ದಾರೆ. ರಗ್ಬಿ ಆಟದ ಸುತ್ತ ಯುವರತ್ನ ಸಿನಿಮಾದ ಟೀಸರ್ ಮಾಡಲಾಗಿದೆ. ಇದನ್ನೂ ಓದಿ: ‘ಯುವರತ್ನ’ ಟೀಸರ್ ರಿಲೀಸ್ – ರಗ್ಬಿ ಆಟಗಾರನಾದ ಪುನೀತ್
The #Yuvarathnaa teaser is looking brilliant! All the best @VKiragandur, @Karthik1423 & the entire team at @hombalefilms ????https://t.co/5a94CHbufI
— Sanjay Dutt (@duttsanjay) October 7, 2019
ಹೊಂಬಾಳೆ ಫಿಲಂ ಯೂಟ್ಯೂಬ್ ಚಾನಲ್ನಲ್ಲಿ `ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ಪುನೀತ್ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲಂನಲ್ಲಿ ನಿರ್ಮಾಣ ಮಾಡುತ್ತಿದೆ. ಇದೇ ಸಂಸ್ಥೆಯ `ಕೆಜಿಎಫ್ 2′ ಸಿನಿಮಾದ ಮೂಲಕ ಸಂಜಯ್ ದತ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಟೀಸರ್ ನಲ್ಲಿ ಪುನೀತ್ “ಈ ದುನಿಯಾದಲ್ಲಿ ಮೂರು ತರ ಗಂಡಸರಿಸುತ್ತಾರೆ. ನಿಯಮವನ್ನು ಫಾಲೋ ಮಾಡೋನು, ನಿಯಮವನ್ನು ಬ್ರೇಕ್ ಮಾಡೋನು, ಮೂರನೇಯವನು ನನ್ನ ತರ ರೂಲ್ ಮಾಡೋನು” ಎಂಬ ಮಾಸ್ ಡೈಲಾಗ್ ಹೇಳಿದ್ದಾರೆ. ರಗ್ಬಿ ಆಟದ ಮೃದಾನದಲ್ಲಿ ಪುನೀತ್ ಖಡಕ್ ಆಟಗಾರನಾಗಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಆಟವನ್ನು ಗೆಲ್ಲುತ್ತಾರೆ.
ಸದ್ಯ ಈ ಟೀಸರ್ ಬಿಡುಗಡೆಯಾದ ಒಂದು ದಿನದಲ್ಲೇ ಯೂಟ್ಯೂಬ್ನಲ್ಲಿ ನಂಬರ್ 1 ಟ್ರೆಂಡಿಂಗ್ನಲ್ಲಿದೆ. ಇದುವರೆಗೂ 8.9 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, 81 ಸಾವಿರಕ್ಕೂ ಮಂದಿ ಲೈಕ್ಸ್ ಮಾಡಿದ್ದಾರೆ. ಸಿನಿಮಾ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಬಹು ವರ್ಷಗಳ ಬಳಿಕ ಯುವರತ್ನ ಸಿನಿಮಾದಲ್ಲಿ ಪುನೀತ್ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ನಟಿ ಸಯೇಷಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.