ಬಾಲಿವುಡ್ ನಟ ಪಂಕಜ್ ತ್ರಿಪಾಠಿ(Pankaj Tripathi), ತಂದೆ ಪಂಡಿತ್ ಬನಾರಸ್ ತ್ರಿವಾರಿ (Pandit Banaras Tiwari) ಅವರು ವಿಧಿವಶರಾಗಿದ್ದಾರೆ. 99ನೇ ವಯಸ್ಸಿಗೆ ಪಂಡಿತ್ ಅವರು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ
ಉತ್ತರಖಂಡ್‌ನಲ್ಲಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಪಂಕಜ್ ಬ್ಯುಸಿಯಿದ್ದರು. ತಂದೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಊರಿಗೆ ನಟ ತೆರಳಿದ್ದಾರೆ. ಸಾಕಷ್ಟು ಸಮಯದಿಂದ ನಟ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. 99ನೇ ವಯಸ್ಸಿಗೆ ಪಂಕಜ್ ತಂದೆ ಸೋಮವಾರ (ಆಗಸ್ಟ್ 21) ನಿಧನರಾಗಿದ್ದಾರೆ. ಬಿಹಾರ್‌ನ ಬೆಲ್ಸಾಂಡ್‌ನಲ್ಲಿ ಪಂಕಜ್ ತ್ರಿಪಾಠಿ ತಂದೆ ಅಂತ್ಯಕ್ರಿಯೆ ನಡೆದಿದೆ.
ಹಿಂದಿ ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರಿಗೆ ಪರಿಚಿತರಾಗಿರುವ ಪಂಕಜ್ ತ್ರಿಪಾಠಿ ಅವರು ಇತ್ತೀಚಿಗೆ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಓ ಮೈ ಗಾಢ್ 2’ನಲ್ಲಿ (OMG 2) ನಟಿಸಿದ್ದರು. ಮಿಮಿ, ಲುಡೋ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಪಂಕಜ್ ನಟಿಸಿದ್ದಾರೆ.