ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

Public TV
1 Min Read
karthik aaryan

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ (Karthik Aryan) ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬೆಂಗಳೂರಿಗೆ ಬಂದಿದ್ದಾರೆ. ರಸ್ತೆಬದಿಯಲ್ಲಿ ಸ್ನೇಹಿತರ ಜೊತೆ ಕಾರ್ತಿಕ್ ಆರ್ಯನ್ ರುಚಿಯಾದ ತಿಂಡಿ ಸವಿದಿದ್ದಾರೆ. ಕನ್ನಡದಲ್ಲೇ ತಮ್ಮದೇ ನಟ ಆರ್ಡರ್ ಮಾಡಿರೋದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

karthik aaryan 1

ಕಾರ್ತಿಕ್ ಆರ್ಯನ್ ಬೆಂಗಳೂರಿಗೆ ಆಗಮಿಸಿದ್ದು, ನಗರದ ಪ್ರಮುಖ ಹೋಟೆಲ್‌ಗಳಿಗೆ ಭೇಟಿ ನೀಡಿ ಊಟದ ಸವಿ ಸವಿದಿದ್ದಾರೆ. ದೇಶವ್ಯಾಪಿ ಜನಪ್ರಿಯಗೊಂಡಿರುವ ‘ದಿ ರಾಮೇಶ್ವರಮ್’ ಕೆಫೆಗೆ ಭೇಟಿ ನೀಡಿದ ನಟ ಕಾರ್ತಿಕ್ ಆರ್ಯನ್ ಮತ್ತು ಗೆಳೆಯರು, ದೋಸೆ, ಇಡ್ಲಿ ಇನ್ನಿತರೆ ತಿಂಡಿಗಳನ್ನು ತಿಂದಿದ್ದಾರೆ. ಜೊತೆಗೆ ಫಿಲ್ಟರ್ ಕಾಫಿ ಕುಡಿದಿದ್ದಾರೆ. ವಿಶೇಷವೆಂದರೆ ‘ದಿ ರಾಮೇಶ್ವರನ್ ಕೆಫೆ’ಯಲ್ಲಿ ನಟ ಕಾರ್ತಿಕ್ ಆರ್ಯನ್ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

 

View this post on Instagram

 

A post shared by KARTIK AARYAN (@kartikaaryan)

‘ಪ್ಯಾರ್ ಕಾ ಪಂಚನಾಮ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟರು. ಆಕಾಶ ವಾಣಿ, ಧಮಾಕಾ, ಲವ್ ಆಜ್ ಕಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಇದನ್ನೂ ಓದಿ:ಎದೆಯ ಗೀಟು ಕಾಣುವಂತೆ ಹಾಟ್ ಆಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ

karthik aryan

ಬೂಲ್ ಭುಲಯ್ಯ, ‘ಸತ್ಯಪ್ರೇಮ್ ಕೀ ಕಥಾ’ ಕಿಯಾರಾ ಅಡ್ವಾಣಿ (Kiara Advani) ಜೊತೆ ಕಾರ್ತಿಕ್ ರೊಮ್ಯಾನ್ಸ್ ಮಾಡಿದ್ದರು. ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಕಿಯಾರಾ- ಕಾರ್ತಿಕ್ ಜೋಡಿ ಮೋಡಿ ಮಾಡಿತ್ತು.

‘ಬೂಲ್ ಭುಲಯ್ಯ’ ಪಾರ್ಟ್ 2ಗೆ ಸಿದ್ಧತೆ ನಡೆಯುತ್ತಿದೆ. ತೃಪ್ತಿ ದಿಮ್ರಿ ಜೊತೆ ಕಾರ್ತಿಕ್ ಆರ್ಯನ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಒಂದಿಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.

Share This Article