ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಸದಾ ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ‘ಕೇಸರಿ 2’ (Kesari 2) ಸಿನಿಮಾ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!
ಕಥಕ್ಕಳಿ ಲುಕ್‌ನಲ್ಲಿರುವ ಫೋಟೋ ಶೇರ್ ಮಾಡಿ ಇದು ಕೇವಲ ಕಾಸ್ಟ್ಯೂಮ್ ಅಲ್ಲ, ನಮ್ಮ ದೇಶದ ಸಂಪ್ರದಾಯದ ಪ್ರತೀಕ ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಏ.22ರಿಂದ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾದ ಶೂಟಿಂಗ್ ಶುರು
View this post on Instagram
‘ಕೇಸರಿ 2’ ಚಿತ್ರದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತು ಚಿತ್ರೀಕರಿಸಿದ್ದಾರೆ. ಇದಕ್ಕಾಗಿ ಸಿ. ಶಂಕರನ್ ನಾಯರ್ ನೇತೃತ್ವದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದ ಅಸಲಿ ಕಥೆಯನ್ನೇ ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಇದೇ ಏ.18ರಂದು ಸಿನಿಮಾ ರಿಲೀಸ್ ಆಗಲಿದೆ.
View this post on Instagram
ಧರ್ಮ ಸಂಸ್ಥೆ ನಿರ್ಮಾಣದ ಸಿನಿಮಾ ಇದಾಗಿದ್ದು, 2019ರಲ್ಲಿ ತೆರೆಕಂಡ ‘ಕೇಸರಿ’ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಮಾಡಿದ್ದಾರೆ. ‘ಕೇಸರಿ 2’ನಲ್ಲಿ ಅಕ್ಷಯ್ ಜೊತೆ ಅನನ್ಯಾ ಪಾಂಡೆ (Ananya Panday), ತಮಿಳು ನಟ ಆರ್. ಮಾಧವನ್ ನಟಿಸಿದ್ದಾರೆ.