‘ಲಾಲ್ ಸಿಂಗ್ ಚಡ್ಡಾ’ (Lal Singh Chaddha) ಸಿನಿಮಾ ಸೋಲಿನ ನಂತರ ನಟನೆಗೆ ನಿವೃತ್ತಿ ಘೋಷಿಸಿದ್ದ ಆಮೀರ್ ಖಾನ್ (Aamir Khan) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಆಮೀರ್ ಇದೀಗ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ಟಾರ್ ನಟನ ಸಿನಿಮಾಗೆ ಬಾಲಿವುಡ್ ಬಿಗ್ ಸ್ಟಾರ್ ಸಾಥ್ ನೀಡ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ಆಮೀರ್ ಖಾನ್- ಕರೀನಾ ಕಪೂರ್ ನಟನೆಯ ಲಾಲ್ ಸಿಂಗ್ ಚಡ್ಡಾ ಫ್ಲಾಪ್‌ನಿಂದ ಬೆಸತ್ತ ಆಮೀರ್ ಖಾನ್ ಅವರು ತಾವು ಸದ್ಯಕ್ಕೆ ಸಿನಿಮಾ ಮಾಡೋದಿಲ್ಲ ಅಂತಾ ಹೇಳಿಕೊಂಡಿದ್ದರು. ವೈಯಕ್ತಿಕ ಜೀವನಕ್ಕೆ ಸಮಯ ಕೊಡುವೆ ಅಂತಾ ತಿಳಿಸಿದ್ದರು. ಇದೀಗ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಇದನ್ನೂ ಓದಿ:ತನ್ನದೇ ಸಿನಿಮಾ ನಟಿಗೆ ತೈಲ ಕೊಡಿ ಸರಿ ಹೋಗ್ತಾಳೆ ಎಂದ ನಿರ್ದೇಶಕ
ಆಮೀರ್ ಖಾನ್ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಟಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ಬರೆದಿದ್ದು, ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ. ಮಹೇಶ್ ಬಾಬು (Mahesh Babu) ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎಸ್‌ಎಸ್‌ಎಂಬಿ 29’ ಎಂಬ ಹೆಸರಿಡಲಾಗಿದ್ದು, ಇದು ಸಾಹಸಮಯ ಚಿತ್ರವಾಗಿದ್ದು 2023ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ದೀಪಿಕಾ ಮತ್ತು ಮಹೇಶ್ ಬಾಬು ಒಟ್ಟಿಗೆ ಕೆಲಸ ಮಾಡುವುದು ಇದೇ ಮೊದಲ ಬಾರಿಯಾಗಿದ್ದು, ಇವರ ಆಮೀರ್ ಕೂಡ ಇರಲಿದ್ದಾರೆ.
ಸದ್ಯ ಬಾಲಿವುಡ್-ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿರೋ ಆಮೀರ್ ಖಾನ್ ಸಿನಿಮಾ ಸುದ್ದಿ ನಿಜಾನಾ ಎಂಬುದನ್ನು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.