ಬಾಲಿವುಡ್ ನಟ ಆಮೀರ್ ಖಾನ್‌ರನ್ನು (Aamir Khan) ಸುದೀಪ್ (Sudeep) ಭೇಟಿಯಾಗಿದ್ದಾರೆ. ಇಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಏನಾದರೂ ಗುಡ್ ನ್ಯೂಸ್ ಕೊಡ್ತಿದ್ದಾರಾ? ಅಂತ ಫ್ಯಾನ್ಸ್ ಊಹಿಸುತ್ತಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಗುಡ್ ನ್ಯೂಸ್- ಹೀರೋ ಆಗಿ ಚಿತ್ರರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ
ನಟ ಸುದೀಪ್ ಸದ್ಯ ಸಿನಿಮಾ ಮತ್ತು ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಆಮೀರ್ ಖಾನ್‌ರನ್ನು ಭೇಟಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಆಮೀರ್ ಮತ್ತು ಸುದೀಪ್ ಭೇಟಿಯಾಗಿದ್ದ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇಬ್ಬರೂ ಜೊತೆಯಾಗಿ ಏನಾದರೂ ಸಿನಿಮಾ ಮಾಡ್ತಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇನ್ನಷ್ಟೇ ಇದಕ್ಕೆ ಉತ್ತರ ಸಿಗಬೇಕಿದೆ.
ಮೂಲಗಳ ಪ್ರಕಾರ, ಆಮೀರ್ ಖಾನ್ ಮನೆಗೆ ಸುದೀಪ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಕ್ಲಿಕ್ಕಿಸಿದ ಫೋಟೋ ಇದಾಗಿದೆ ಎನ್ನಲಾಗಿದೆ.
ಅಂದಹಾಗೆ, ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದ ಕೆಲಸ ಮುಗಿದಿದೆ. ಯಾವಾಗ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ. ಇನ್ನೂ ಅನೂಪ್ ಭಂಡಾರಿ ಜೊತೆಗಿನ ಹೊಸ ಸಿನಿಮಾಗೆ ಅವರು ಕೈಜೋಡಿಸಿದ್ದಾರೆ.