ಬೆಂಗಳೂರು: ರಾತ್ರೋರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೊಲೆರೊ ಕಾರನ್ನು ಕಳ್ಳರು ಎಗ್ಗರಿಸಿಕೊಂಡು ಹೋಗಿರುವ ಘಟನೆ ನಗರದ ಬನಶಂಕರಿಯಲ್ಲಿ ನಡೆದಿದೆ.
ಮಾರ್ಚ್ 3ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕರು ಎಂದಿನಂತೆ ಮನೆ ಮುಂದೆ ರಾತ್ರಿ ಕಾರ್ ಪಾರ್ಕ್ ಮಾಡಿದ್ದಾರೆ. ಬೆಳ್ಳಗ್ಗೆ ಎದ್ದು ಮನೆ ಮುಂದೆ ಕಾರ್ ನೋಡಿದರೆ ಇರುವುದಿಲ್ಲ. ಇದರಿಂದ ಮಾಲೀಕರು ಆತಂಕಗೊಂಡು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ
ಈ ವೇಳೆ ಕಳ್ಳರಿಬ್ಬರು ಬಂದು ಬೊಲೆರೊ ಕಾರು ಕಳ್ಳತನ ಮಾಡಿಕೊಂಡು ಹೋಗಿರುವ ವಿಚಾರ ಬೆಳಕಿಗೆ ಬರುತ್ತದೆ. ಕೂಡಲೇ ಘಟನೆ ಸಂಬಂಧ ಮಾಲೀಕರಾದ ಶಿವಣ್ಣ ಸಿಸಿಟಿವಿಯೊಂದಿಗೆ ಹೋಗಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ