ಮಂಗಳೂರು: ಸೇತುವೆಯಿಂದ ಬೊಲೆರೋ ವಾಹನವೊಂದು ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ನಡೆದಿದೆ.
ಡಯಾನ(45) ಮೃತ ಮಹಿಳೆ. ಮೃತ ಮಹಿಳೆಯನ್ನು ಕಾರ್ಕಳದ ಬೋಳ ನಿವಾಸಿ ಎಂದು ಗುರುತಿಸಲಾಗಿದ್ದು, ಶಾಂಭವಿ ನದಿಯ ತಡೆಯಿಲ್ಲದ ಸೇತುವೆ ದಾಟುತ್ತಿದ್ದಾಗ ಬೊಲೆರೋ ಆಯತಪ್ಪಿ ನದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಬೊಲೆರೋ ವಾಹನದಲ್ಲಿ ಮಹಿಳೆ ಸೇರಿ ನಾಲ್ವರು ಕಾರ್ಕಳದ ಬೋಳದಿಂದ ಮಂಗಳೂರಿಗೆ ಮದುವೆಗೆಂದು ಹೋಗುತ್ತಿದ್ದರು. ಈ ವೇಳೆ ಶಾಂಭವಿ ನದಿಯ ತಡೆಯಿಲ್ಲದ ಸೇತುವೆ ದಾಟುತ್ತಿದ್ದಾಗ ಬೊಲೆರೋ ವೇಗವಾಗಿ ಬಂದಿದ್ದು, ಆಯತಪ್ಪಿ ನದಿಗೆ ಬಿದ್ದಿದೆ. ಪರಿಣಾಮ ಡಯಾನ ನದಿಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ವಾಹನದಲ್ಲಿದ್ದ ಮೂವರು ಪುರುಷರನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸ್ಥಳೀಯರು ಮಹಿಳೆಯ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv