ಬೀಜಿಂಗ್: ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಹೊರಗೆ ಊಟಕ್ಕೆ ಹೋದಾಗ ಸಾಮಾನ್ಯವಾಗಿ ಮೊದಲು ಸೂಪ್ ಆರ್ಡರ್ ಮಾಡುತ್ತಾರೆ. ಹೀಗೆ ಚೀನಾ ರೆಸ್ಟೋರೆಂಟ್‍ವೊಂದರಲ್ಲಿ ಗ್ರಾಹಕರು ಸೂಪ್ ಆರ್ಡರ್ ಮಾಡಿದಾಗ ಇದ್ದಕ್ಕಿದ್ದಂತೆ ಅದು ಸ್ಫೋಟಗೊಂಡಿದೆ.
ಹೌದು. ಚೀನಿ ರೆಸ್ಟೋರೆಂಟ್ ಒಂದರಲ್ಲಿ ಟೇಬಲ್ ಮೇಲೆ ಇಟ್ಟಿದ್ದ ಬಿಸಿಬಿಸಿ ಸೂಪ್ ನಿಂದ ಏನೋ ವಾಸನೆ ಬರುತ್ತಿದೆ ಎಂದು ಗ್ರಾಹಕರು ವೇಟರ್ ಬಳಿ ಹೇಳಿದ್ದಾರೆ. ಆಗ ವೇಟರ್ ಅದು ಏನು ಎಂದು ನೋಡುವಷ್ಟರಲ್ಲಿ ಆ ಬೌಲ್ ಬ್ಲಾಸ್ಟ್ ಆಗಿ ಹೋಗಿದೆ. ಆ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಬ್ಲಾಸ್ಟ್ ಆದ ಹೊಡೆತಕ್ಕೆ ಮುಂದೆ ಇದ್ದ ಗ್ರಾಹಕ ಮತ್ತು ವೇಟರ್ ಮುಖದ ಮೇಲೆಲ್ಲಾ ಬಿಸಿ ಬಿಸಿ ಸೂಪ್ ಹಾರಿದೆ.
Advertisement
Advertisement
ಸೂಪ್‍ನಲ್ಲಿ ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಬೆಚ್ಚಿಬಿದ್ದು ಅಲ್ಲಿಂದ ಓಡಿ ಹೋಗಿದ್ದಾರೆ. ಈ ದೃಶ್ಯವೂ ರೆಸ್ಟೋರೆಂಟ್‍ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ಸೂಪ್‍ನಲ್ಲೂ ಬ್ಲಾಸ್ಟ್ ಆಗತ್ತಾ? ಅಂತಹದ್ದು ಅದರಲ್ಲಿ ಏನಿತ್ತು ಎಂದು ತಲೆಗೆ ಹುಳ ಬಿಟ್ಟುಕೊಂಡು ಪ್ರಶ್ನಿಸುತ್ತಿದ್ದಾರೆ.
Advertisement
ಆಗಿದ್ದು ಏನು?
ರೆಸ್ಟೋರೆಂಟ್‍ಗೆ ಬಂದಿದ್ದ ಇಬ್ಬರು ಗ್ರಾಹಕರು ಆಹಾರ ಸೇವಿಸುತ್ತಿರುವಾಗ ಅವರ ಬಳಿಯಿದ್ದ ಹಗುರವಾದ ಲೈಟರ್ ಸೂಪ್ ಒಳಗೆ ಬಿದ್ದಿತ್ತು. ಅದನ್ನು ವೈಟರ್ ಸೌಟಿನಿಂದ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಬಿಸಿಬಿಸಿ ಸೂಪ್ ಒಳಗೆ ಬಿದ್ದ ಲೈಟರ್ ಶಾಕಕ್ಕೆ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
Advertisement
https://www.youtube.com/watch?v=TeW4d5I1ew8