ರಾಗಿ, ಗೋಧಿ ಬಳಸಿ ವಿಧ ವಿಧವಾದ ದೋಸೆ ಮಾಡುವ ನಾವು ಪಾಲಕ್ ದೋಸೆ ಮಾಡಲು ಒಮ್ಮೆ ಟ್ರೈ ಮಾಡಬಹುದಾಗಿದೆ. ಪಾಲಕ್ ಸೊಪ್ಪನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು. ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಹೆಚ್ಚು ಹೊತ್ತು ಇರುವಂತೆ ಈ ದೋಸೆ ಮಾಡುತ್ತದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಕುಚ್ಚಲಕ್ಕಿ- 2 ಕಪ್
* ಉದ್ದಿನ ಬೇಳೆ -1 ಕಪ್
* ಕಡಲೆ ಬೇಳೆ – ಅರ್ಧ ಕಪ್
* ಹೆಸರು ಬೇಳೆ – ಅರ್ಧ ಕಪ್
* ತೊಗರಿ ಬೇಳೆ – ಅರ್ಧ ಕಪ್
* ಅವಲಕ್ಕಿ – 1 ಕಪ್
* ಮೆಂತ್ಯ – 1 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
Advertisement
* ಕುಚ್ಚಲಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ ಮತ್ತು ತೊಗರಿ. ಅವಲಕ್ಕಿಯನ್ನು ನೀರಿನಲ್ಲಿ ನೆನೆಹಾಕಿಟ್ಟಿರಬೇಕು.
* ಈಗ ಕುಚ್ಚಲಕ್ಕಿಯನ್ನು ಅವಲಕ್ಕಿ, ಬೇಳೆಗಳ ಜೊತೆಗೆ ಮಿಕ್ಸಿಯಲ್ಲಿ ಹಾಕಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು 8-9 ಗಂಟೆಗಳ ಕಾಲ ಹುದುಗು ಬರಲು ಬಿಡಿ. ನಂತರ ದೋಸೆ ಮಾಡಲು ಹಿಟ್ಟು ಸಿದ್ಧವಾದಂತೆ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ದೋಸೆ ಕಾವಲಿಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
* ನಂತರ ಅದರ ಮೇಲೆ ಹಿಟ್ಟನ್ನು ಹಾಕಿ, ದೋಸೆಯನ್ನು ಮಾಡಿ. ಇದನ್ನು ನೀವು ತೆಂಗಿನ ಕಾಯಿ ಚಟ್ನಿ ಜೊತೆ ತಿಂದರೆ ರುಚಿಯಾಗಿರುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್