ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

Advertisements

ಸಾಮಾನ್ಯವಾಗಿ ಯಾವುದೇ ಪಾರ್ಟಿ ಮತ್ತು ಸಮಾರಂಭಕ್ಕೆ ಸಿನಿಮಾ ರಂಗದ ಸಿಲೆಬ್ರಿಟಿಗಳು ಹೋದಾಗ ಅವರ ಜೊತೆ ಬಾಡಿಗಾರ್ಡ್ಸ್ ಹೋಗುವುದು ವಾಡಿಕೆ. ಕೆಲವು ನಟರಂತೂ ಬಾಡಿಗಾರ್ಡ್ಸ್ ಇಲ್ಲದೇ ಮನೆಯಿಂದ ಹೊರಗೆ ಒಂದು ಹೆಜ್ಜೆಯನ್ನೂ ಇಡುವುದಿಲ್ಲ. ಆದರೆ, ಮೊನ್ನೆ ನಡೆದ ಕರಣ್ ಜೋಹಾರ್ ಹುಟ್ಟು ಹಬ್ಬಕ್ಕೆ ಬಾಡಿಗಾರ್ಡ್ಸ್‍ ನಿರ್ಬಂಧಿಸಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ

Advertisements

ಬಾಲಿವುಡ್ ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ ಮೊನ್ನೆಯಷ್ಟೇ ಅದ್ಧೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇದು ಅವರ 50ನೇ ವರ್ಷದ ಹುಟ್ಟು ಹಬ್ಬವಾಗಿದ್ದರಿಂದ, ಎಂದಿಗಿಂತಲೂ ಅದ್ಧೂರಿತನವನ್ನೇ ಕಾಪಾಡಿಕೊಳ್ಳಲಾಗಿತ್ತು. ಕೇವಲ ಬಾಲಿವುಡ್ ನಟ ನಟಿಯರು ಮಾತ್ರವಲ್ಲ, ದಕ್ಷಿಣದ ತಾರೆಯರಿಗೂ ಆಹ್ವಾನ ನೀಡಲಾಗಿತ್ತು. ಈ ಆಹ್ವಾನದ ಜೊತೆಗೆ ಬಾಡಿಗಾರ್ಡ್ಸ್ ಕರೆದುಕೊಂಡು ಬರಬೇಡಿ ಎಂದು ಖಡಕ್ಕಾಗಿ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ : ಒಟಿಟಿಯಲ್ಲೂ ರಾಜಮೌಳಿ ‘RRR’ ದಾಖಲೆ

Advertisements

ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಶಾರುಖ್ ಖಾನ್, ದಕ್ಷಿಣದಿಂದ ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ವಿಜಯ್ ದೇವರಕೊಂಡ ಸೇರಿದಂತೆ ಸಾಕಷ್ಟು ಸಿಲೆಬ್ರಿಟಿಗಳು ಈ ಹುಟ್ಟು ಹಬ್ಬದ ಪಾರ್ಟಿಗೆಯಲ್ಲಿ ಹಾಜರಿದ್ದರು. ರಶ್ಮಿಕಾ ಅಂತ ಪಾರ್ಟಿಯಲ್ಲಿ ಹಾಕಿಕೊಂಡು ಡ್ರೆಸ್ ನಿಂದಾಗಿ ಟ್ರೋಲ್ ಕೂಡ ಆದರು. ಇದಕ್ಕೆ ಕಾರಣ, ತಮ್ಮೊಂದಿಗೆ ಸಹಾಯಕರನ್ನು ಕರೆದುಕೊಂಡು ಹೋಗದೇ ಇರುವುದು ಎನ್ನುವುದು ಈಗ ಬಹಿರಂಗವಾಗಿದೆ. ಇದನ್ನೂ ಓದಿ : ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಸಿನಿಮಾ ಫಸ್ಟ್ ಲುಕ್ ರಿಲೀಸ್

Advertisements

ಕನ್ನಡದಿಂದಲೂ ಈ ಪಾರ್ಟಿಗೆ ಯಶ್, ಪ್ರಶಾಂತ್ ನೀಲ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇವರಾರೂ ಆ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣವೂ ಗೊತ್ತಾಗಿಲ್ಲ. ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ವೇಳೆ ಕರಣ್ ಜೋಹಾರ್ ಅವರೇ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರಿಂದ, ಆ ತಂಡವು ಬರ್ತಡೇ ಪಾರ್ಟಿಗೆ ಹೋಗಲಿದೆ ಎಂದು ವರದಿಯಾಗಿತ್ತು.

Advertisements
Exit mobile version