ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣಬೇಕೆಂದು ಪ್ರಾರಂಭ ಮಾಡುವ ಹೊಸ ವರ್ಷವೇ ಯುಗಾದಿ. ಪ್ರಕೃತಿಯಲ್ಲೂ ಹೊಸತನ, ಹೊಸ ಚಿಗುರು ಮೊಳೆಯುವ ಈ ಕಾಲಕ್ಕೆ ದೇಹ, ಮನಸ್ಸನ್ನು ಹಗುರಗೊಳಿಸಬೇಕು. ಚೈತ್ರ ಮಾಸ ಪ್ರಾರಂಭವಾಗುತ್ತಲೇ ದೇಹಕ್ಕೆ ತಂಪು ಮಾಡಲು ವಿವಿಧ ರೀತಿಯ ಪಾನೀಯಗಳನ್ನು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಪಾನಕ, ಮಜ್ಜಿಗೆಗೆ ಬೇಡಿಕೆ ಹೆಚ್ಚು. ನಾವಿಂದು ಈ ವಿಶೇಷ ದಿನಕ್ಕೆ ತಂಪಾದ ಮಜ್ಜಿಗೆ ಹಾಗೂ ಪಾನಕದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಈ ಪಾನೀಯಗಳನ್ನು ಸವಿದು, ಯುಗಾದಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಿ.
Advertisement
ಪಾನಕ ಮಾಡಲು ಬೇಕಾಗುವ ಪದಾರ್ಥಗಳು:
ಬೆಲ್ಲ – 2 ಕಪ್
ಏಲಕ್ಕಿ – 3
ಕಾಳು ಮೆಣಸು – 5
ಸಕ್ಕರೆ – ಒಂದು ಟೀಸ್ಪೂನ್
ಉಪ್ಪು – ಚಿಟಿಕೆ
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ನಿಂಬೆಹಣ್ಣು – 1
Advertisement
Advertisement
ಪಾನಕ ಮಾಡುವ ವಿಧಾನ:
* ಮೊದಲಿಗೆ ನೀರಿನಲ್ಲಿ ಬೆಲ್ಲವನ್ನು ಹಾಕಿ ಕರಗಿಸಿ.
* ಏಲಕ್ಕಿ, ಕಾಳು ಮೆಣಸು ಹಾಗೂ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಮಿಶ್ರಣ ಮಾಡಿ.
* ಬಳಿಕ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿ.
* ಇದೀಗ ಬೆಲ್ಲದ ಪಾನಕ ಸವಿಯಲು ಸಿದ್ಧ. ಇದನ್ನೂ ಓದಿ: ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ
Advertisement
ಮಜ್ಜಿಗೆ ಮಾಡಲು ಬೇಕಾಗುವ ಪದಾರ್ಥಗಳು:
ಮೊಸರು – ಕಾಲು ಲೀಟರ್
ಹಸಿಮೆಣಸಿನ ಕಾಯಿ – 2
ಶುಂಠಿ – 1 ಇಂಚು
ಕರಿಬೇವು – 1 ಎಸಳು
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಹಿಂಗ್ – ಚಿಟಿಕೆ
ಮಜ್ಜಿಗೆ ಮಾಡುವ ವಿಧಾನ:
* ಮೊದಲಿಗೆ ಮಿಕ್ಸರ್ ಜಾರ್ಗೆ ಮೊಸರು ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಅದನ್ನು ಒಂದು ಪಾತ್ರೆಗೆ ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣ ಮಾಡಿ.
* ಈಗ ಮಿಕ್ಸರ್ ಜಾರ್ಗೆ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಹಾಗೂ ಹಿಂಗ್ ಹಾಕಿ ರುಬ್ಬಿಕೊಳ್ಳಿ.
* ಈ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಕ್ಸ್ ಮಾಡಿ.
* ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ.
* ಇದೀಗ ರುಚಿಕರ ಮಜ್ಜಿಗೆ ಸವಿಯಲು ಸಿದ್ಧ. ಇದನ್ನೂ ಓದಿ: ಸಬ್ಬಕ್ಕಿ, ಅವಲಕ್ಕಿಯಿಂದ ಮಾಡಿ ಸಖತ್ ಟೇಸ್ಟಿ ವಡೆ