ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್‌ನಿಂದ (BMTC Volvo Bus) ಸರಣಿ ಅಪಘಾತ ಸಂಭವಿಸಿದ ಘಟನೆ ನಗರದ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ (ಆ.12) ಬೆಳಿಗ್ಗೆ 9:25ರ ಸುಮಾರಿಗೆ ಘಟನೆ ನಡೆದಿದ್ದು, ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಇದೀಗ ಲಭ್ಯವಾಗಿದೆ.
Advertisement
ಬಸ್ ಅಪಘಾತದ (Bus Accident) ದೃಶ್ಯಗಳು ಸಾರ್ವಜನಿಕರು ಹಾಗೂ ಇತರ ವಾಹನ ಸವಾರರಲ್ಲಿ ಆತಂಕ ಹುಟ್ಟಿಸಿದೆ. ಬಸ್ ಸರಣಿ ವಾಹನಗಳನ್ನ ಗುದ್ದುತ್ತಿದ್ದಂತೆ ನಡುರಸ್ತೆಯಲ್ಲಿ ವಾಹನ ಸವಾರರ ಚೀರಾಟ – ಕೂಗಾಟ ಜೋರಾಗಿ ಕೇಳಿಬಂದಿದೆ. ಚೂರು ಹೆಚ್ಚು ಕಡಿಮೆಯಾಗಿದ್ದರೂ ಪ್ರಾಣಕ್ಕೆ ಕುತ್ತುತರುವಂತಿತ್ತು ಎನ್ನುವ ರೀತಿ ದೃಶ್ಯಾವಳಿ ಇದೆ. ಇದನ್ನೂ ಓದಿ: ನಾನು ತುಂಬಾ ಅದೃಷ್ಟವಂತೆ: ಜೈಲಿನಲ್ಲಿರುವ ಪವಿತ್ರಾ ನೆನೆದು ಮಗಳು ಭಾವುಕ ಪೋಸ್ಟ್
Advertisement
ಬಿಎಂಟಿಸಿ ವೋಲ್ವೋ ಬಸ್ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡುತ್ತಿತ್ತು. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಬಿಎಂಟಿಸಿ ಚಾಲಕ ರಾಜ ಕುಮಾರ್ 4 ದ್ವಿಚಕ್ರ ವಾಹನಗಳು, 4 ಕಾರುಗಳಿಗೆ ಗುದ್ದಿಸಿದ್ದರು. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ಇದಾಗಿದೆ. ಘಟನೆಯಲ್ಲಿ ಓರ್ವ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ.
Advertisement
Advertisement
ಸದ್ಯ ಘಟನೆ ಕುರಿತು ಬಿಎಂಟಿಸಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬಾಬಾ ರಾಮ್‍ದೇವ್, ಆಚಾರ್ಯ ಬಾಲಕೃಷ್ಣಗೆ ಬಿಗ್ ರಿಲೀಫ್ – ನ್ಯಾಯಾಂಗ ನಿಂದನೆ ಆರೋಪ ಕೈಬಿಟ್ಟ ಸುಪ್ರೀಂ