ಬೆಂಗಳೂರು: ಬಸ್‌ನಲ್ಲಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸುರಕ್ಷಿತವಾಗಿ ಮಾಲೀಕರಿಗೆ ಹಿಂದಿರುಗಿಸಿದ ಬಿಎಂಟಿಸಿ ಬಸ್ (BMTC Bus) ಸಿಬ್ಬಂದಿ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿರುವ ಬ್ಯಾಗನ್ನು ಬಸ್‌ನಲ್ಲಿ ಬಿಟ್ಟು ಇಳಿದಿದ್ದ ಮಹಿಳೆಗೆ ಬ್ಯಾಗನ್ನು ಸುರಕ್ಷಿತವಾಗಿ ಹಿಂತಿರುಗಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ದರ ಪರಿಷ್ಕರಣೆ ಕೇಂದ್ರದ ಹೊಣೆ – ತೇಜಸ್ವಿ ಸೂರ್ಯ ಗೂಬೆ ಕೂರಿಸುವುದು ಬೇಡ: ದಿನೇಶ್ ಗುಂಡೂರಾವ್
ಜನವರಿ 31 ರಂದು ಕೆಆರ್ ಮಾರ್ಕೆಟ್‌ನಿಂದ ಪದ್ಮನಾಭ ನಗರಕ್ಕೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಕೆ.ಆರ್ ಮಾರ್ಕೆಟ್‌ನಲ್ಲಿ ಬಸ್ ಹತ್ತಿದ ಮಹಿಳೆಯೊಬ್ಬರು ಚಿನ್ನಾಭರಣವಿರುವ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟು ಬಸವನಗುಡಿಯಲ್ಲಿ ಇಳಿದಿದ್ದರು.
ಬಸ್ ರಶ್ ಇದ್ದ ಕಾರಣ ಸಿಬ್ಬಂದಿ ಬ್ಯಾಗ್ ಗಮನಿಸಿರಲಿಲ್ಲ. ನಂತರ ಮಹಿಳೆ ಬಿಎಂಟಿಸಿ ಸೆಂಟ್ರಲ್ ಆಫೀಸ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಟಿಕೆಟ್‌ನಲ್ಲಿ ನಮೂದಿಸಿದ ಬಸ್ ನಂಬರ್ ಮೂಲಕ ಬಸ್ ಪತ್ತೆ ಮಾಡಿ, ಬಸ್‌ಗೆ ಹೋದಾಗ ಬ್ಯಾಗ್ ಸಿಕ್ಕಿದೆ. ಈ ವೇಳೆ ಮಹಿಳೆ ಗಾಬರಿಗೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ಬಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್

