ಬೆಂಗಳೂರು: ರಾಜ್ಯ ರಾಜಧಾನಿಯ ಸಂಚಾರನಾಡಿ ಬಿಎಂಟಿಸಿಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ. ಟೆಂಡರ್‌ಶೂರ್‌ನಂಥ ರಸ್ತೆಗಳಲ್ಲೇ ಓಡಾಡಲು ಯೋಗ್ಯವಿಲ್ಲದ, 9 ಲಕ್ಷ ಕಿ.ಮೀ. ಓಡಿದ, ಗುಜರಿಗೆ ಹಾಕಬೇಕಾದ ಬಿಎಂಟಿಸಿ ಬಸ್‍ಗಳನ್ನು ವಾಯವ್ಯ ಸಾರಿಗೆಗೆ ಮಾರಾಟ ಮಾಡಲು ನಿರ್ಧರಿಸಿದೆ.
ಬಿಎಂಟಿಸಿ 9 ಲಕ್ಷ ಕಿ.ಮೀ ಓಡಿದ ಬಸ್‍ಗಳು ಫಿಟ್ ಇಲ್ಲದ ಕಾರಣ ಗುಜುರಿಗೆ ಹಾಕಲು ನಿರ್ಧರಿಸಿತ್ತು. ಆದರೆ ಗುಜರಿಗೆ ಹಾಕುವ ಬದಲು ನಮಗೆ ಕೊಡಿ. ಆ ಬಸ್‍ಗಳನ್ನು ನಾವು ರಿಪೇರಿ ಮಾಡಿಕೊಂಡು ಓಡಿಸಿಕೊಳ್ಳುತ್ತೇವೆ ಎಂದು ವಾಯವ್ಯ ಸಾರಿಗೆ ಕೇಳಿದೆ. ವಾಯವ್ಯ ಸಾರಿಗೆ ಕೇಳಿದ್ದೇ ತಡ ಈ ಬಗ್ಗೆ ಸ್ವಲ್ಪವೂ ಯೋಚಿಸದ ಬಿಎಂಟಿಸಿ, ಅಸ್ಥಿ ಪಂಜರದಂತಾಗಿರುವ ಬಸ್‍ಗಳನ್ನು ಕೊಡಲು ಒಪ್ಪಿದೆ. ಅಷ್ಟೇ ಅಲ್ಲದೇ ಒಂದ್ ಬಸ್‍ಗೆ 50 ಸಾವಿರ ಕೊಟ್ಬಿಡಿ ಅಂತ ಸೇಲ್‍ಗೆ ಮುಂದಾಗಿದೆ. ಇದನ್ನೂ ಓದಿ: ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ
Advertisement
Advertisement
ಈ ರೀತಿಯ ಘಟನೆ ಒಂದು ಕಡೆಯಾದರೆ, ಮತ್ತೊಂದು ಕಡೆ, ಕೊರೊನಾ ಹೊಡೆತದಿಂದ ಪಾರಾಗಲು ಕೆಎಸ್‍ಆರ್‍ಟಿಸಿ ನಿವೃತ್ತ ವೃದ್ಧ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ. ಬೆಂಗಳೂರಿನ ರಸ್ತೆ ಮಧ್ಯೆಯೇ ಕೆಟ್ಟು ನಿಲ್ಲುವ ಬಿಎಂಟಿಸಿ ಅದೇಗೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಓಡಾಡುತ್ತವೋ ಗೊತ್ತಿಲ್ಲ. ಮೊದಲೇ ಫಿಟ್ ಇಲ್ಲ. ಜೊತೆಗೆ ವಯೋವೃದ್ಧ ಚಾಲಕರನ್ನು ಕೂರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ಯಾವ ಅನಾಹುತಕ್ಕೆ ದಾರಿ ಮಾಡಿಕೊಡ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲುರವರೇ ಉತ್ತರಿಸಬೇಕಿದೆ. ಇದನ್ನೂ ಓದಿ: ರಾಜ್ಯಸಭೆ ಟಿಕೆಟ್‍ಗೆ ಪೈಪೋಟಿ – ಅಂತಿಮವಾಗದ ಪಟ್ಟಿ