ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ (BMTC) ಸಂಸ್ಥೆ ಇದೀಗ ವಜ್ರ ಸೇವೆಗಳ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ವಜ್ರ ಸಾಪ್ತಾಹಿಕ ಪಾಸನ್ನು (Vayu Weekly Pass) ಆಗಸ್ಟ್ 1 ರಿಂದ ವಿತರಣೆ ಮಾಡುತ್ತಿದೆ.
ದರ ಎಷ್ಟು?
ವಜ್ರ ಸಾಪ್ತಾಹಿಕ ಪಾಸು 750 ರೂ. – ಪಾಸುದಾರರಿಗೆ ಪಾಸಿನ ಮಾನ್ಯತಾ ಅವಧಿಯಲ್ಲಿ ಸಂಸ್ಥೆಯ ವಜ್ರ, ಸಾಮಾನ್ಯ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಸೇವೆಗಳಲ್ಲಿ (ವಾಯುವಜ್ರ ಮತ್ತು ವಿಶೇಷ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ. ಇದನ್ನೂ ಓದಿ: FAStag ವ್ಯವಹಾರ – ದೇಶದಲ್ಲೇ ಕರ್ನಾಟಕಕ್ಕೆ 3ನೇ ಸ್ಥಾನ
ವಜ್ರ ಸಾಪ್ತಾಹಿಕ ಪಾಸು ಹೊಂದಿರುವ ಪ್ರಯಾಣಿಕರು ವಜ್ರ ವೇಗದೂತ ಸೇವೆಗಳಲ್ಲಿ ಪ್ರಯಾಣಿಸುವಾಗ, ಪ್ರತ್ಯೇಕವಾಗಿ 10 ರೂ. ವೇಗದೂತ ಸೇವಾ ಶುಲ್ಕ ಹಾಗೂ ಅನ್ವಯವಾಗುವ ಟೋಲ್ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಸಾರ್ವಜನಿಕರು ಈ ಪಾಸುಗಳನ್ನು ಸುಲಭವಾಗಿ ಪಡೆಯಲು, ಸಂಸ್ಥೆಯು ಟುಮ್ಯಾಕ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಮಾದರಿಯಲ್ಲಿ ವಿತರಣಾ ವ್ಯವಸ್ಥೆ ರೂಪಿಸಿದೆ. ಪ್ರಯಾಣಿಕರು ಆಪ್ ಮೂಲಕ ನೇರವಾಗಿ ಪಾಸು ಖರೀದಿ ಮಾಡಬಹುದು. ಇದನ್ನೂ ಓದಿ: 8 ಪುರುಷರ ಮದುವೆಯಾಗಿ ಲಕ್ಷಾಂತರ ಹಣ ವಸೂಲಿ – 9ನೇ ಮದುವೆಯಾಗಲು ಮಾತುಕತೆಗೆ ಹೊರಟಿದ್ದವಳು ಸಿಕ್ಕಿಬಿದ್ಳು!
ಈ ಕ್ರಮವು ವಜ್ರ ಸೇವೆ ಬಳಸುವ ನಿತ್ಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲತೆ ಹಾಗೂ ಅನುಭವ ಸುಗಮಗೊಳಿಸಲು ಸಹಕಾರಿಯಾಗಲಿದೆ ಎಂದು ಬಿಎಂಟಿಸಿ ಹೇಳಿದೆ.