ಬೆಂಗಳೂರು: ಬಿಎಂಟಿಸಿ (BMTC) ನಿಗಮ ಸಾಲದ ಸುಳಿಯಲ್ಲಿ ಸಿಲುಕಿದೆ ಅಂತ ಖುದ್ದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಒಪ್ಪಿಕೊಂಡಿದ್ದಾರೆ.
Advertisement
ವಿಧಾನ ಪರಿಷತ್ (Vidhan Parishad) ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದ್ ರಾಜು (Govida Raju) ಬದಲಾವಣೆ ಯುಬಿ ವೆಂಕಟೇಶ ಬಿಎಂಟಿಸಿ ಸಾಲದ ಬಗ್ಗೆ ಪ್ರಶ್ನೆ ಕೇಳಿದರು. ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಶ್ರೀರಾಮುಲು ಅವರು, 5 ವರ್ಷಗಳಲ್ಲಿ ಬಿಎಂಟಿಸಿ 1,324 ಕೋಟಿ ಸಾಲ ಮಾಡಿದೆ. ಸಾಲವನ್ನು ಬಸ್ ಖರೀದಿ, ಭವಿಷ್ಯ ನಿಧಿ ಬಳಕೆ, ಸಂಸ್ಥೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಅಂತ ತಿಳಿಸಿದರು.
Advertisement
Advertisement
ಈ ಸಾಲದಲ್ಲಿ ಈಗಾಗಲೇ 679 ಕೋಟಿ ಸಾಲ ತೀರಿಸಲಾಗಿದೆ. ಉಳಿದ ಸಾಲ ಸರ್ಕಾರದಿಂದ ನಮಗೆ ಸಾಲ ಬರಬೇಕು. ಸರ್ಕಾರ ಅನುದಾನ ಕೊಟ್ಟ ಬಳಿಕ ಸಾಲ ತೀರಿಸುತ್ತೇವೆ. ಸರ್ಕಾರ ಮಕ್ಕಳು, ಕಾರ್ಮಿಕರ ಬಸ್ ಪಾಸ್ ಹಣ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಹಣ ಬಂದ ಕೂಡಲೇ ಸಾಲ ತೀರಿಸಲಾಗುತ್ತದೆ ಎಂದು ಹೇಳಿದರು.
Advertisement
ಸಾರಿಗೆ ಇಲಾಖೆ ಲಾಭಕ್ಕೆ ತರಲು ಕ್ರಮಗಳು ಆಗುತ್ತಿದೆ. ಇದಕ್ಕಾಗಿ ಶ್ರೀನಿವಾಸಮೂರ್ತಿ ಸಮಿತಿ ವರದಿ ಬಂದಿದೆ. ವರದಿ ಅನ್ವಯ ಕ್ರಮ ತೆಗೆದುಕೊಳ್ಳುತ್ತೇವೆ ಅಂದರು. ಈ ವೇಳೆ ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ, ಕೋವಿಡ್‍ನಿಂದ ಅನೇಕ ಕಡೆ ಬಸ್ ನಿಲ್ಲಿಸಲಾಗಿದೆ. ನಿಲ್ಲಿಸಿರುವ ಬಸ್ ಬಿಡುಗಡೆ ಮಾಡಿ ಅಂತ ಮನವಿ ಮಾಡಿದರು. ಇದನ್ನೂ ಓದಿ: ಭಾರತ ಇಸ್ಲಾಮಿಕ್ ರಾಷ್ಟ್ರವಾಗಬೇಕು, ಪೂರ್ಣ ಸ್ವಾತಂತ್ರ್ಯಕ್ಕೆ ಬಾಂಬ್ ತಯಾರಿ: ಶಿವಮೊಗ್ಗ ಆರೋಪಿಗಳಿಗಿದೆ ಐಸಿಸ್ ಲಿಂಕ್
ಇದಕ್ಕೆ ಉತ್ತರ ನೀಡಿದ ಸಚಿವರು, 4 ನಿಗಮದಿಂದ 15 ಕೋಟಿ ಡೀಸೆಲ್ ನಿತ್ಯ ಖರೀದಿ ಆಗುತ್ತಿದೆ. ಬಿಎಂಟಿಸಿ ಕಟ್ಟಡಗಳನ್ನು ಬಾಡಿಗೆ ಕೊಡುವ ಮೂಲಕ ನಷ್ಟ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಮಕ್ಕಳಿಗೆ ಸಮಸ್ಯೆ ಆಗದಂತೆ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಕೊರೊನಾದಿಂದ ಕೆಲ ಕಡೆ ಬಸ್ ನಿಲ್ಲಿಸಲಾಗಿತ್ತು. ಶಾಲಾ-ಕಾಲೇಜು ಮಕ್ಕಳಿಗೆ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇವೆ ಅಂತ ಭರವಸೆ ನೀಡಿದರು. ಇದನ್ನೂ ಓದಿ: ನಕಲಿ ಲೋಕಾಯುಕ್ತ ಅಧಿಕಾರಿಯಿಂದ ತಾಲೂಕು ಕಚೇರಿ ಮೇಲೆ ದಾಳಿ- ಐಡಿ ಕಾರ್ಡ್ ತೋರಿಸಿ ಎಂದಿದ್ದಕ್ಕೆ ಎಸ್ಕೇಪ್