ರಾಯಚೂರು: ಬಿಸಿಲಿನ ತಾಪಕ್ಕೆ (Heatstroke) ಬಿಎಂಟಿಸಿ ಬಸ್ ಕಂಡಕ್ಟರ್ (BMTC Conductor) ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಹಸಮಕಲ್ ಮೂಲದ ಮಲ್ಲಯ್ಯ (45) ಬಿಸಿಲಿನ ತಾಪಕ್ಕೆ ಬಲಿಯಾದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ (Bengaluru) ಕಾರ್ಯನಿರ್ವಹಿಸುತ್ತಿದ್ದ ಅವರು, ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಮನೆಗೆ ಬೇಕಾದ ಕಿರಾಣಿ ಸಾಮಾಗ್ರಿಗಳನ್ನು ತರಲು ತೆರಳಿದ್ದಾಗ ಬಿಸಿಲಿನ ತಾಪಕ್ಕೆ ಅವರು ಕುಸಿದು ಬಿದ್ದಿದ್ದಾರೆ. ಸಾರ್ವಜನಿಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ದುರಾದೃಷ್ಟವಶಾತ್ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಗರ್ಭಿಣಿ – ದೂರು ನೀಡಿದ್ರೆ ಕೊಲೆ ಬೆದರಿಕೆ ಹಾಕಿದ್ದ ಯುವಕ
ಜಿಲ್ಲೆಯ ಜಾಲಿಬೆಂಚಿ ಗ್ರಾಮದ ರೈತರೊಬ್ಬರು ಗುರುವಾರ ಬಿಸಿಲಿನ ತಾಪಕ್ಕೆ ಬಲಿಯಾಗಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದೆ.
ರಾಯಚೂರಿನಲ್ಲಿ ಕಳೆದ 15 ವರ್ಷಗಳಲ್ಲೇ ಈ ಬಾರಿ ದಾಖಲೆಯ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಸರಾಸರಿ 46.7 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ. ಇದನ್ನೂ ಓದಿ: ಅಮಿತ್ ಶಾ ನಕಲಿ ವೀಡಿಯೋ ಪ್ರಕರಣ – ಕಾಂಗ್ರೆಸ್ ಕಾರ್ಯಕರ್ತ ಅರೆಸ್ಟ್