ಓವರ್ ಸ್ಪೀಡ್‍ಗೆ BMTC ಬಸ್ ಟೈರ್ ಸ್ಫೋಟ – ತಪ್ಪಿದ ಭಾರೀ ಅನಾಹುತ

1 Min Read

ಬೆಂಗಳೂರು: ಓವರ್ ಸ್ಪೀಡ್‌ನಲ್ಲಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ನ (BMTC Bus) ಟೈರ್‌ ಸ್ಫೋಟಗೊಂಡು ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿಗೆ ಬಂದು ನಿಂತ ಘಟನೆ ವಿದ್ಯಾರಣ್ಯಪುರ ರಸ್ತೆಯಲ್ಲಿ ನಡೆದಿದೆ.

ಬಸ್‌ ಮಿತಿ ಮೀರಿದ ವೇಗದಲ್ಲಿ ಬರುವುದು ಹಾಗೂ ಟೈರ್‌ ಸ್ಫೋಟಗೊಂಡು ಅಡ್ಡಾದಿಡ್ಡಿ ಚಲಿಸಿದ ದೃಶ್ಯ ಬೈಕ್‌ ಸವಾರರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸೆರೆಯಾದ ದೃಶ್ಯದಲ್ಲಿ ವಾಹನವೊಂದನ್ನು ಓವರ್‌ಟೇಕ್ ಮಾಡಿಕೊಂಡು ಬಸ್‌ ಚಾಲಕ ಬಂದಿದ್ದಾನೆ. ಅಲ್ಲದೇ ಡಬಲ್ ಯೆಲ್ಲೋ ಲೈನ್ ಕ್ರಾಸ್ ಮಾಡಿದ್ದಾನೆ. ಈ ವೇಳೆ ಟೈರ್‌ ಸ್ಫೋಟಗೊಂಡಿದೆ. ಇದನ್ನೂ ಓದಿ: ಲವ್ವರ್‌ಗಾಗಿ ಪತ್ನಿಗೆ ಡಿವೋರ್ಸ್ – ಇತ್ತ ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆಗೆ ಬೆಂಕಿಯಿಟ್ಟು ಕೊಲೆ

ಎದುರಿಗೆ ಕಾರು ಹಾಗೂ ಬೈಕ್‌ ಬರುತ್ತಿತ್ತು. ಅದೃಷ್ಟವಶಾತ್‌ ಕಾರಲ್ಲಿದ್ದವರು ಹಾಗೂ ಬೈಕ್‌ ಸವಾರ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಆಗಿಲ್ಲ.‌

ಬಸ್ ರಸ್ತೆ ಬದಿ‌ ಬಸ್ ನಿಲ್ಲುತ್ತಿದ್ದಂತೆ ವಾಹನ ಸವಾರರು ಹಾಗೂ ಸಾರ್ವಜನಿಕರು, ಓವರ್‌ ಸ್ಪೀಡ್‌ನಲ್ಲಿ ಬಸ್‌ ಚಲಾಯಿಸಿದ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ – ಕಳ್ಳಸಂಬಂಧ ಕೊಲೆಯಲ್ಲಿ ಅಂತ್ಯ

Share This Article