ಬೆಂಗಳೂರು: ಬಿಎಂಟಿಸಿ ಬಸ್ (BMTC Bus) ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ (Namma Metro ) ಪಿಲ್ಲರ್‌ಗೆ ಡಿಕ್ಕಿಯಾದ ಘಟನೆ ಗಾಯಗೊಂಡಿದ್ದ 12 ಮಂದಿ ಪೈಕಿ ಈರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಬಿಡದಿ ಮೂಲದ ಜಯರಾಮ್ (57) ಮೃತ ವ್ಯಕ್ತಿ. ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಕೆಂಗೇರಿಯ ಮೈಲಸಂದ್ರದ ಬಳಿ ಮೆಟ್ರೋ ಪಿಲ್ಲರ್‌ಗೆ ಬಸ್ ಡಿಕ್ಕಿಯಾದ ಘಟನೆ ನಡೆದಿತ್ತು. ಡ್ರೈವರ್, ಕಂಡಕ್ಟರ್ ಸೇರಿ 12 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಶನಿವಾರ ತಡರಾತ್ರಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಮೆಡ್-ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್
ಅಪಘಾತಕ್ಕೀಡಾದ ಬಸ್ ಕೆ.ಆರ್ ಮಾರ್ಕೆಟ್‌ನಿಂದ ಬಿಡದಿಗೆ ಹೊರಟಿತ್ತು. ಈ ವೇಳೆ ಸ್ಟೇರಿಂಗ್ ಕಟ್ಟಾಗಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ಮೆಟ್ರೋ ಪಿಲ್ಲರ್ 607ಕ್ಕೆ ಡಿಕ್ಕಿಯಾಗಿತ್ತು. ಇದನ್ನೂ ಓದಿ: ಬೆಂಕಿ ಬಿದ್ದರೂ ತಿಳಿಯದೇ ಟ್ರ್ಯಾಕ್ಟರ್ ಚಾಲನೆ- ನಾಲ್ವರು ಅಪಾಯದಿಂದ ಪಾರು
ಘಟನೆ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾದ ಏರ್‌ಬೇಸ್ ಉಡೀಸ್ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್ ವಿಶೇಷವೇನು ಗೊತ್ತಾ?