– ನಷ್ಟ ಕಡಿಮೆ ಮಾಡಲು ಪ್ರತಿ ಮೂರು ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ರಸ್ತಾಪ
ಬೆಂಗಳೂರು: ಬಿಎಂಆರ್‌ಸಿಎಲ್ (BMRCL) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಮೂರು ವರ್ಷಗಳಿಗೊಮ್ಮೆ ಶೇ.12ರಷ್ಟು ದರ ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ.
ಪ್ರತಿ ವರ್ಷ ಶೇ.5ರಷ್ಟು ಮೆಟ್ರೋ ಟಿಕೆಟ್ ದರವನ್ನ ಏರಿಕೆ ಮಾಡಲು ದರ ಪರಿಷ್ಕರಣಾ ಸಮತಿ ಶಿಫಾರಸು ಮಾಡಿದೆ. ಆದರೆ ಇದೀಗ ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ದರ ಏರಿಕೆ ಮಾಡುವ ಪ್ರಸ್ತಾಪವನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಇದನ್ನೂ ಓದಿ: ಕೂಲಿ ವಿಚಾರಕ್ಕೆ ಗಲಾಟೆ, ಮಾಲೀಕನಿಂದ ಫೈರಿಂಗ್ – ಮಗುವಿನ ತಲೆಗೆ ಹೊಕ್ಕ ಗುಂಡು
ನಮ್ಮ ಮೆಟ್ರೋ ಸರ್ಜಾಪುರದಿಂದ ಹೆಬ್ಬಾಳ ಮಾರ್ಗದ ಡಿಪಿಆರ್ ಸಲ್ಲಿಕೆ ಮಾಡಿದೆ. ಇದರ ಜೊತೆಗೆ ಹೊಸ ಮಾದರಿಯಲ್ಲಿ ಒಂದು ವರ್ಷದ ಬದಲು ಮೂರು ವರ್ಷಕ್ಕೊಮ್ಮೆ ದರ ಏರಿಕೆ ಮಾಡುವ ಪ್ರಸ್ತಾಪವನ್ನ ಸಹ ತಿಳಿಸಿದೆ. 2033ರ ವೇಳೆಗೆ ಕಾಮಗಾರಿ ಮುಗಿಯಲಿದ್ದು, ಆ ವೇಳೆಗೆ ಹೊಸ ಮಾದರಿಯಲ್ಲಿ ಮೂರು ವರ್ಷಗಳಿಗೆ ಒಮ್ಮೆ ಶೇ.12ರಷ್ಟು ದರ ಏರಿಕೆ ಮಾಡಿದ್ರೆ ಈಗಿರುವ ನಷ್ಟದ ಪ್ರಮಾಣವನ್ನ ಕಡಿಮೆ ಮಾಡುವ ಅಂದಾಜಿನ ಲೆಕ್ಕಚಾರವನ್ನ ಉಲ್ಲೇಖ ಮಾಡಿದೆ.
ಈ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ರೇ ಬಳಿಕ ಇದನ್ನ ದರ ಪರಿಷ್ಕರಣಾ ಸಮತಿಯೂ ಪರಿಶೀಲನೆ ಮಾಡಬೇಕಿದೆ. ಬಳಿಕವಷ್ಟೇ ಗ್ರೀನ್ ಸಿಗ್ನಲ್ ಸಿಗಲಿದೆ. ಅಂತಿಮ ನಿರ್ಧಾರ ದರ ಪರಿಷ್ಕರಣೆ ಸಮತಿಯದ್ದೇ ಆಗಿರಲಿದೆ. ಇದನ್ನೂ ಓದಿ:ಪ್ರ ಧಾನ್ ರಾಜೀನಾಮೆ ಬಗ್ಗೆ ನಾಳೆಯವರೆಗೆ ಕೇಂದ್ರ ಸಮಯ ಕೇಳಿದೆ: ಸಿಜೆಪಿ
