ಬೆಂಗಳೂರು: ಮೆಟ್ರೋ (Namma Metro) ಟಿಕೆಟ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದ್ದು, ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.

ಮೆಟ್ರೋ ದರ ಏರಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ. ದರ ಏರಿಕೆ ಖಂಡಿಸಿ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ, ಪೊಲೀಸ್ ಭದ್ರತೆಗೆ ಶಂಕರಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗೆ ಬಿಎಂಆರ್‌ಸಿಎಲ್ ಸಹಾಯಕ ಭದ್ರತಾಧಿಕಾರಿಗಳು ಪತ್ರ ಬರೆದಿದ್ದಾರೆ. ಸಂಘ ಸಂಸ್ಥೆಗಳಿಂದ ಆಸ್ತಿ ಹಾನಿ ಸಾಧ್ಯತೆಯ ಭೀತಿ ಇದೆ. ಇದರಿಂದ ಫೆ.9 ರಿಂದ 11ನರ ವರೆಗೆ ಭದ್ರತೆ ನೀಡಲು ಮನವಿ ಮಾಡಲಾಗಿದೆ.
ಪತ್ರದಲ್ಲಿ ರಾಶಿ ರಾಶಿ ತಪ್ಪು
ಬರೆದ ಪತ್ರದಲ್ಲಿ ಹಲವಾರು ತಪ್ಪುಗಳಿದ್ದು ಕನ್ನಡಿಗರ ಕೆಂಗಣ್ಣಿಗೆ ಮೆಟ್ರೋ ಅಧಿಕಾರಿಗಳು ಗುರಿಯಾಗಿದ್ದಾರೆ. ರಾಜ್ಯದಲ್ಲಿ ಸೇವೆ ನೀಡುವ ನಿಗಮದ ಅಧಿಕಾರಿಗಳಿಗೆ ರಾಜ್ಯದ ಭಾಷೆ ಬರೆಯೋಕು ಬರಲ್ವಾ? ಒಂದು ಪತ್ರ, ಹತ್ತಾರು ತಪ್ಪು. ಕನ್ನಡ ಬರೆಯೋಕು ಇಷ್ಟೊಂದು ಪರದಾಟನಾ? ಎಂದು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ.

