LatestMain PostNational

ಮುಂಬೈನಲ್ಲಿ ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ!

ಮುಂಬೈ: ಸಾಕುಪ್ರಾಣಿಗಳ ಅಂತ್ಯಸಂಸ್ಕಾರ ಮಾಡಲು ಮುಂಬೈ ಮುನ್ಸಿಪಲ್ ಕಾರ್ಪೋರೇಷನ್‍ನಿಂದ ದಹಿಸರ್ ಸ್ಮಶಾನದಲ್ಲಿ ಇಲೆಕ್ಟ್ರಿಕ್ ಇನ್ಸಿನರೇಟರ್ ಸ್ಥಾಪಿಸಲಾಗಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕ ಸಂಸ್ಥೆಯಿಂದ ಮೊದಲ ಬಾರಿಗೆ ಈ ರೀತಿಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಾಕುಪ್ರಾಣಿಗಳನ್ನು ಸುಡುವ ಯಂತ್ರಕ್ಕೆ ಹಿಂದಿನಿಂದಲೂ ಬೇಡಿಕೆಯಿತ್ತು. ಹೀಗಾಗಿ ಸಾಕು ಪ್ರಾಣಿಗಳ ಶವವನ್ನು ವಿದ್ಯುತ್ ಯಂತ್ರದ ಮೂಲಕ ಸುಡಲು ನಿರ್ಧರಿಸಲಾಗಿದೆ. ಸಾಕುಪ್ರಾಣಿ ಮಾಲೀಕರಿಗೆ ಮುಂಬೈ ಮಹಾನಗರ ಪಾಲಿಕೆ ಒದಗಿಸುತ್ತಿರುವ ಮೊದಲ ಸೇವೆಯಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಸಾಕುಪ್ರಾಣಿಗಳ ಅಂತ್ಯಕ್ರಿಯೆಗೆ ಸಾಮಾನ್ಯ ಸ್ಮಶಾನ ಇಲ್ಲ. ಬಹುಬೇಡಿಕೆಯಿಂದಾಗಿ ಇದನ್ನು ನಿರ್ಮಿಸಲಾಗಿದ್ದು, 2,500 ಚದರ ಅಡಿ ಪ್ರದೇಶ ವಿಸ್ತೀರ್ಣ ಇದೆ. ಈ ಸೌಲಭ್ಯವೂ ಖಾಸಗಿಯಾಗಿದೆ. ಇದರ ಬಗ್ಗೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್ 

Leave a Reply

Your email address will not be published. Required fields are marked *

Back to top button