ದಾವಣಗೆರೆ: ರಕ್ತದೊತ್ತಡದಿಂದ (Blood Pressure) ಕೇದಾರನಾಥ (Kedarnath) ಯಾತ್ರೆಗೆ ತೆರಳಿದ್ದ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ.
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ನಿವಾಸಿ ನಾಗರತ್ನಮ್ಮ (62) ಮೃತ ದುರ್ದೈವಿ. ವೇದಮೂರ್ತಿ ಅನ್ನದಾನಯ್ಯ ಶಾಸ್ತ್ರಿಗಳ ಧರ್ಮಪತ್ನಿ ನಾಗರತ್ನಮ್ಮ ಪತಿ ಜೊತೆ ಬೆಂಗಳೂರು ಮೂಲದ ಟ್ರಾವೆಲ್ ಏಜೆನ್ಸಿ ಮೂಲಕ ಉತ್ತರಾಖಂಡದಲ್ಲಿರುವ ಕೇದಾರನಾಥ ಯಾತ್ರೆಗೆ ತೆರಳಿದ್ದರು. ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ?
ಬದರಿನಾಥ ಹಾಗೂ ಕೇದಾರನಾಥ ಪ್ರವಾಸ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ರಕ್ತದೊತ್ತಡ ಹೆಚ್ಚಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲು ಮೇಲೆ ಉರ್ದು ಹಬ್ಬ ಆಚರಣೆಗೆ ಕರವೇ ವಿರೋಧ

