ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ: ಸಾಹಿತಿ ದೇವನೂರು ಮಹಾದೇವ

Public TV
1 Min Read
gauri lankesh devanuru mahadeva

ಮೈಸೂರು: ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ. ಇದು ವ್ಯಕ್ತಿಯ ಕೊಲೆ ಅಲ್ಲ. ಇದೊಂದು ಮೌಲ್ಯದ ಕೊಲೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ತನಗೆ ಇಷ್ಟ ಇಲ್ಲದೇ ಇರೋದು ಭೂಮಿ ಮೇಲೆ ಇರಬಾರದು ಅನ್ನೋ ಪ್ರವೃತ್ತಿ ಹೆಚ್ಚಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ನಿರುದ್ಯೋಗ. ನಿರುದ್ಯೋಗಿಗಳು ಕೆಲಸವಿಲ್ಲದೆ ಕೊಲೆ ಮಾಡುವ ಹಂತ ತಲುಪಿದ್ದಾರೆ. ಈಗಲಾದರೂ ನಿರುದ್ಯೋಗದಿಂದ ಉದ್ಯೋಗದತ್ತ ಚಿಂತನೆ ಮಾಡಬೇಕಿದೆ ಅಂದ್ರು.

ಬಡವ-ಬಲ್ಲಿದರ ನಡುವೆ ಅಂತರ ಕಡಿಮೆ ಆಗಬೇಕು. ಆಗ ದೊಡ್ಡವರೇ ಬಂದು ಕೊಲೆ ಮಾಡುತ್ತಾರೆ. ಇಲ್ಲವಾದಲ್ಲಿ ಬಡವರು ಸುಪಾರಿ ಕೊಲೆಗಡುಕರಾಗುತ್ತಾರೆ. ಗೌರಿ ಹತ್ಯೆ ವೈಚಾರಿಕತೆಯ ಹತ್ಯೆ ಅಂತ ಹೇಳಿದ್ರು.

 

Share This Article
Leave a Comment

Leave a Reply

Your email address will not be published. Required fields are marked *