– ಗ್ರಹಣದ ಬಳಿಕ ಗ್ರಹಣ ಶಾಂತಿ ಪೂಜೆ
ಬೆಂಗಳೂರು: ಇಂದು ನಭೋ ಮಂಡಲ ಚಂದ್ರಗ್ರಹಣದ (Lunar Eclipse) ಕೌತಕಕ್ಕೆ ಸಾಕ್ಷ್ಯಿಯಾಗಲಿದೆ. ಈ ರಕ್ತ ಚಂದ್ರಗ್ರಹಣ (Blood Moon) ಇಂದು ಮಧ್ಯಾಹ್ನ ಆರಂಭವಾಗಿ ಸಂಜೆ ವೇಳೆಗೆ ಅಂತ್ಯವಾಗಲಿದೆ. ನಮ್ಮ ರಾಜ್ಯದಲ್ಲಿ ಚಂದ್ರಗ್ರಹಣದ ಗೋಚರವಾಗದೇ ಇದ್ದರೂ ಗ್ರಹಣದ ಪ್ರಭಾವ ಇರಲಿದೆ. ಹಾಗಾಗಿ ಇಂದು ಬೆಂಗಳೂರಿನ (Bengaluru) ಪ್ರಮುಖ ದೇವಾಲಯದಲ್ಲಿ (Temples) ಗ್ರಹಣದ ಪ್ರಯುಕ್ತ ವಿಶೇಷ ಪೂಜೆಗಳು ನಡೆಲಿದೆ.
ಹೌದು, ಇಂದು ಮಧ್ಯಾಹ್ನ 3:27ಕ್ಕೆ ರಕ್ತಚಂದ್ರಗ್ರಹಣ ಆರಂಭವಾಗಿ ಸಂಜೆ 6:46ಕ್ಕೆ ಮೋಕ್ಷಗೊಳ್ಳಲಿದೆ. ಈ ಸಮಯದಲ್ಲಿ ಬೆಂಗಳೂರಿನ ಎಲ್ಲಾ ದೇವಾಲಯ ಬಂದ್ ಆಗಲಿದೆ. ಗ್ರಹಣದ ಕಾರಣದಿಂದ ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಅಬುಧಾಬಿಯಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು – 2 ವಿಮಾನಗಳಲ್ಲಿ 500 ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ
ಕಾಡು ಮಲ್ಲೇಶ್ವರ ದೇವಾಲಯ:
ಇಂದು ಬೆಳಗ್ಗೆ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಶಿವನಿಗೆ ಬೆಳಗ್ಗೆಯೇ ವಿಶೇಷ ಪೂಜೆ ಮಾಡಿ, ಬಳಿಕ ಭಕ್ತರಿಗೆ ಮಧ್ಯಾಹ್ನ 12ರವರಗೆ ದರ್ಶನದ ವ್ಯವಸ್ಥೆ ಇರಲಿದೆ. ಬಳಿಕ ಸಂಜೆ ಗ್ರಹಣ ಶುದ್ಧಿ ಮಾಡಿ, ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ನೀಡಲಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಸಿಲುಕಿರುವ ಪ್ರವಾಸಿಗರಿಗೆ `ಕನ್ನಡಿಗಾಸ್ ಹೆಲ್ಪ್‌ಲೈನ್’ ನೆರವು
ಅಣ್ಣಮ್ಮ ದೇವಾಲಯ:
ಮಂಗಳವಾರವಾಗಿರುವುದರಿಂದ ಬೆಳಗ್ಗೆ 6 ಗಂಟೆಗೆ ತಾಯಿ ಅಣ್ಣಮ್ಮನಿಗೆ ವಿಶೇಷ ಹಾಲಿನ ಅಭಿಷೇಕ ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಬಳಿಕ ಗ್ರಹಣದ ಮೋಕ್ಷದ ಬಳಿಕ ತಾಯಿಗೆ ಗಂಗೆಯ ಅಭಿಷೇಕ ಮಾಡಿ ಶುಚಿ ಮಾಡಿ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಜೊತೆಗೆ ನಾಳೆ ಬೆಳಗ್ಗೆ ಗ್ರಹಣ ಶಾಂತಿ ಹೋಮ ಕೂಡ ಮಾಡಲಿದ್ದಾರೆ. ಇದನ್ನೂ ಓದಿ: ಏಲಿಯನ್ ಫೈಲ್ಸ್ ರಿಲೀಸ್‌ಗೆ ಟ್ರಂಪ್ ಆದೇಶ – ‘ಏರಿಯಾ 51’ರಲ್ಲಿ ಇವೆಯಾ ಅನ್ಯಗ್ರಹ ಜೀವಿಗಳ ಮೃತದೇಹಗಳು?
ಗವಿಗಂಗಾಧರೇಶ್ವರ ದೇವಾಲಯ:
ಇಂದು ಎಂದಿನಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿದೆ. 9 ಗಂಟೆವರೆಗೆ ಗಂಗಾಧರನಿಗೆ ವಿಶೇಷ ಪೂಜೆ ಮಾಡಲಿದ್ದಾರೆ. ಸಂಜೆ ಮತ್ತೆ ಗಂಗಾಧರೇಶ್ವರನಿಗೆ ಜಲಾಭಿಷೇಕ ಮಾಡಿ, ನಾಳೆ ಮಹಾಭಿಷೇಕ ಮಾಡಿ ಗ್ರಹಣ ಶಾಂತಿ ಮಾಡಲಾಗುತ್ತದೆ. ಇದನ್ನೂ ಓದಿ: ʻದೇವರನಾಡುʼ ಕೇರಳ ʻಕೇರಳಂʼ ಆಗಿದ್ದೇಕೆ? – ಇದು ಕೇವಲ ಹೆಸರಲ್ಲ ಐತಿಹಾಸಿಕ, ಸಾಂಸ್ಕೃತಿಕ ಪಯಣದ ಹಿಂದಿನ ಕಥೆ!
ಬನಶಂಕರಿ ದೇವಾಲಯ:
ಬನಶಂಕರಿ ದೇವಾಲಯದಲ್ಲಿ ಬೆಳಗ್ಗೆ 5ರಿಂದಲೇ ವಿಶೇಷ ಹುಣ್ಣಿಮೆ ಅಭಿಷೇಕ ಮತ್ತು ಪೂಜೆ ನಡೆಯಲಿದೆ. 8:30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಗ್ರಹಣದ ಬಳಿಕ ಬನಶಂಕರಿಗೆ ವಿಶೇಷ ಅಭಿಷೇಕ ಮಾಡಿ ವಿಶೇಷ ಅಲಂಕಾರದಿಂದ ಭಕ್ತರ ದರ್ಶನ ನೀಡಲಿದ್ದಾಳೆ ತಾಯಿ ಬನಶಂಕರಿ. ಇದನ್ನೂ ಓದಿ: 4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್
ವಿಜಯನಗರ ಶನಿದೇವರ ದೇವಾಲಯ:
ಬೆಳಗ್ಗೆ 5ರಿಂದಲೇ ಶನಿ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಬಳಿಕ ಅಭಿಷೇಕ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ. ಸಂಜೆ ಗ್ರಹಣ ಶಾಂತಿ ಮಾಡಿ ನಾಳೆ ಬೆಳಗ್ಗೆ ಸತ್ಯನಾರಾಯಣ ಪೂಜೆ ಕೂಡ ಮಾಡಲಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭೋಜೇಗೌಡ ಸೇಫ್ – ಸ್ವತಃ ವಿಡಿಯೋ ಮಾಡಿ ಕಳಿಸಿರುವ MLC

