ಸಂಚಾರಿ ವಿಜಯ್ (Sanchari Vijay) ಅವರ ಹುಟ್ಟು ಹಬ್ಬಕ್ಕಾಗಿ (Birthday) ಅವರ ಗೆಳೆಯರ ಬಳಗ ಇಂದು ರಕ್ತದಾನ ಶಿಬಿರ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಪ್ರತಿ ವರ್ಷವೂ ವಿಜಯ್ ಅವರ ಹುಟ್ಟು ಹಬ್ಬದ ದಿನದಂದು ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಆಪ್ತ ಸ್ನೇಹಿತ ಅನಿಲ್ ಗೌಡ.
Advertisement
ಇಂದು ಬೆಂಗಳೂರಿನ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಐವತ್ತು ಹೆಚ್ಚು ವಿಜಯ್ ಗೆಳೆಯರು ರಕ್ತದಾನ ಮಾಡುವ ಮೂಲಕ ಗೆಳೆಯನನ್ನು ನೆನಪಿಸಿಕೊಂಡರು. ಹುಟ್ಟು ಹಬ್ಬದ ನೆಪದಲ್ಲಿ ಇದೇ ರೀತಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂಥ ಪ್ರತಿಜ್ಞೆ ಮಾಡಿದರು. ಪೂರ್ಣ, ವಿವೇಕ್, ನಾರಾಯಣ್, ನಂದ, ರಾಜೇಶ್, ಸಾಗರ್, ಅನಿಲ್ ಸೇರಿದಂತೆ ಹಲವಾರು ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement
Advertisement
ಈ ಕುರಿತು ಮಾತನಾಡಿದ ಅನಿಲ್ ಗೌಡ, ‘ಗೆಳೆಯ ವಿಜಯ್ ಬದುಕಿದ್ದಾಗ ಒಟ್ಟಿಗೆ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೆವು. ಅವರೊಂದಿಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದೆವು. ಈಗ ಅವರ ಕೆಲಸಗಳನ್ನು ಸಾಧ್ಯವಾದ ಮಟ್ಟಿಗೆ ನಾವೆಲ್ಲ ನೆಡಸಿಕೊಂಡು ಹೋಗುತ್ತಿದ್ದೇವೆ. ಅವರು ಕೂಡ ಅನೇಕ ಸಲ ರಕ್ತದಾನ ಮಾಡುವ ಮೂಲಕ ನಮಗೆಲ್ಲ ಮಾದರಿ ಆಗಿದ್ದರು’ ಅಂದರು.
Advertisement
ರಂಗಭೂಮಿ ಹಿನ್ನೆಲೆಯ ವಿಜಯ್ ಕಿರುತೆರೆ, ಸಂಗೀತ ಮತ್ತು ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ನಟನೆಯ ಹರಿವು ಸೇರಿದಂತೆ ಹಲವಾರು ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅತೀ ಚಿಕ್ಕ ವಯಸ್ಸಿನಲ್ಲೇ ರಸ್ತೆ ಅಪಘಾತದಲ್ಲಿ ವಿಜಯ್ ನಿಧನ ಹೊಂದಿದ್ದಾರೆ.