ಬೆಂಗಳೂರು: ಹೃದಯದಲ್ಲಿ ಬ್ಲಾಕೇಜ್ ಕಂಡುಬಂದ ಹಿನ್ನೆಲೆ ಕನ್ನಡ ಹಾಗೂ ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರಿಗೆ ಯಶಸ್ವಿ ಸ್ಟಂಟ್ ಅಳವಡಿಕೆ ಮಾಡಲಾಗಿದೆ.
ನಿನ್ನೆ (ಮಾ.24) ಸಚಿವರು ಫ್ಯಾಮಿಲಿ ಡಾಕ್ಟರ್ ಅವರಿಂದ ತಪಾಸಣೆಗೆ ಒಳಗಾದಾಗ ಹೃದಯದಲ್ಲಿ ಬ್ಲಾಕೇಜ್ ಇರುವುದು ಕಂಡುಬಂದಿತ್ತು. ಇಂದು ಬೆಳಿಗ್ಗೆ ಇಲಾಖೆಯ ಕಾರ್ಯಕ್ರಮವೊಂದನ್ನು ಮುಗಿಸಿ, ಶಿವರಾಜ್ ತಂಗಡಗಿ ಅವರು ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಾಗಿದ್ದರು. ಮಧ್ಯಾಹ್ನದ ವೇಳೆಗೆ ವೈದ್ಯರು ಸ್ಟಂಟ್ ಅಳವಡಿಕೆ (Stent placement) ಮಾಡಿದ್ದು, ಯಶಸ್ವಿಯಾಗಿದೆ. ಸದ್ಯ ಸಚಿವರು ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಚಿವ ಶಿವರಾಜ್ ತಂಗಡಗಿ ಆಸ್ಪತ್ರೆಗೆ ದಾಖಲು – ಸಿದ್ದಗಂಗಾ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ಭಾನುವಾರ (ಮಾ.22) ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸಚಿವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದು ಡಿಸ್ಚಾರ್ಜ್ ಮಾಡಿದ್ದರು.

