ಬೆಳಗಾವಿ: ಕರ್ನಾಟಕದಿಂದ ಗೋವಾ (Goa) ರಾಜ್ಯಕ್ಕೆ ಚೋರ್ಲಾ ಘಾಟ್ ಮೂಲಕ ತೆರಳುವ ಭಾರೀ ವಾಹನ (Vehicles) ಗಳಿಗೆ ಗೋವಾ ಸರ್ಕಾರ ನಿಷೇಧ ಹೇರಿದ್ದು, ಸಂಚಾರ ದಟ್ಟಣೆ (Traffic) ಆಗುತ್ತೆ ಎಂದು ಉತ್ತರ ಗೋವಾ ಟ್ರಾಫಿಕ್ ಎಸ್‍ಪಿ ಮನವಿ ಮೇರೆಗೆ ಉತ್ತರ ಗೋವಾದ ಡಿಸಿ ಮಮು ಹಗೆ ಆದೇಶವನ್ನ ಹೊರಡಿಸಿದ್ದಾರೆ.
Advertisement
ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿರುವ ಗೋವಾ ಉತ್ತರ ಜಿಲ್ಲಾಧಿಕಾರಿ, ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರೀ ಲಾರಿಗಳಿಗೆ 2023ರ ಮಾರ್ಚ್ 19ರವರೆಗೆ ಭಾರೀ ಲಾರಿಗಳ ಸಂಚಾರ ನಿಷೇಧಿಸಿದ್ದಾರೆ. ಇದನ್ನೂ ಓದಿ: ಮನೆ ಬಿದ್ದು 9 ತಿಂಗಳಾದ್ರೂ ಪರಿಹಾರ ನೀಡಿಲ್ಲ – ಆತ್ಮಹತ್ಯೆ ಬೆದರಿಕೆ ಹಾಕಿದ ನೆರೆ ಸಂತ್ರಸ್ತ
Advertisement
Advertisement
ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ. ಹೀಗಾಗಿ ಗೋವಾ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಚೋರ್ಲಾ ಘಾಟ್ ಮೂಲಕ ಟ್ರಾನ್ಸ್ ಪೋರ್ಟ್ ವಾಹನಗಳು ತೆರಳುತ್ತವೆ. ಇದರಿಂದ ಕೇರಿ-ಬೆಳಗಾವಿ ರಾಜ್ಯ ಹೆದ್ದಾರಿ 01ರಲ್ಲಿ ಭಾರೀ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಪರಿಣಾಮ ಉತ್ತರ ಗೋವಾ ಟ್ರಾಫಿಕ್ ಎಸ್‍ಪಿ ಮನವಿ ಮೇರೆಗೆ ಉತ್ತರ ಗೋವಾದ ಡಿಸಿ ಮಮು ಹಗೆ ಸಂಚಾರ ನಿರ್ಬಂಧಿಸಿದ್ದಾರೆ.
Advertisement
ಈ ವೇಳೆ ಮಾತನಾಡಿದ ಲಾರಿ ಮಾಲೀಕರು, ರಾಮನಗರ (Ramanagar) ಮೂಲಕ ಗೋವಾಗೆ ತೆರಳುವ ರಸ್ತೆ ದುರಸ್ತಿ ಆಗುವವರೆಗೂ ಚೋರ್ಲಾ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಕಾರವಾರ (Karwar) ಮೂಲಕ ಗೋವಾಗೆ ತೆರಳಲು 250 ಕಿಲೋಮೀಟರ್ ಆಗುತ್ತದೆ. ಅಷ್ಟು ಬಾಡಿಗೆ ನಮಗೆ ಸಿಗೊದಿಲ್ಲ. ಆಹಾರ ಉತ್ಪನ್ನ, ಕಟ್ಟಡ ಕಾಮಗಾರಿಗಳಿಗೆ ಬೇಕಾಗುವ ವಸ್ತುಗಳು ಸೇರಿ ವಿವಿಧ ಸರಕುಗಳನ್ನು ಸಾಗಿಸುತ್ತಿದ್ದೇವೆ. ನಿನ್ನೆ ರಾತ್ರಿಯಿಂದ ನಮ್ಮ ಚಾಲಕರು ಲಾರಿಗಳ (Lorry) ಜೊತೆ ನಿಂತಲ್ಲೇ ನಿಂತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಈ ಬಗ್ಗೆ ರಾಜ್ಯ ಸರ್ಕಾರ (Karnataka Government) ಲಾರಿ ಮಾಲೀಕರು, ವಾಹನ ಚಾಲಕರಿಗೆ ಆಗುತ್ತಿರುವ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.