ಹಾವೇರಿ: ಮಕ್ಕಳು (Children) ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಬೇಕೇ ಬೇಕು. ಮಕ್ಕಳು ಬೇಕು ಅಂತ ಲಕ್ಷಾಂತರ ರೂಪಾಯಿ ಆಸ್ಪತ್ರೆಯಲ್ಲಿ ಖರ್ಚು ಮಾಡಿದರೂ ಮಕ್ಕಳ ಭಾಗ್ಯ ಎಲ್ಲರಿಗೂ ಲಭಿಸುವುದಿಲ್ಲ. ಅದರೆ ಹಾವೇರಿ (Haveri) ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ಗ್ರಾಮದ ಶಾಂತೇಶ ದೇವಸ್ಥಾನದಲ್ಲಿ (Shantesha Temple) ವಿಜಯದಶಮಿಯಂದು ಮಹಿಳೆಯರಿಗೆ ಪ್ರಸಾದ ನೀಡಲಾಗುತ್ತಿದೆ.
ಸಾತೇನಹಳ್ಳಿಯ ಶಾಂತೇಶ ದೇವಸ್ಥಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ದೇವಸ್ಥಾನದಲ್ಲಿ ವಿಜಯದಶಮಿ (Vijayadashami) ದಿನದಂದು ಶ್ರವಣ ನಕ್ಷತ್ರದಲ್ಲಿ ಮಕ್ಕಳಾಗದವರಿಗೆ ಔಷಧಿ (Medicine) ನೀಡಲಾಗುತ್ತದೆ. ಮಕ್ಕಳಾಗದ ಮಹಿಳೆಯರು ದೇವಸ್ಥಾನದಲ್ಲಿ ಬಾಳೆ ಹಣ್ಣಿನಲ್ಲಿ ನೀಡುವ ಔಷಧಿ ಸೇವಿಸಿದರೆ ಸಂತಾನ ಭಾಗ್ಯ ಗ್ಯಾರಂಟಿ ಎನ್ನುವ ನಂಬಿಕೆಯಿದೆ.
Advertisement
Advertisement
ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಸಾವಿರಾರು ಸಂಖ್ಯೆಯ ಮಹಿಳೆಯರು ದೇವಸ್ಥಾನಕ್ಕೆ ಬಂದು ಶಾಂತೇಶನಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಅರ್ಚಕರು ನೀಡುವ ಔಷಧಿ ಸೇವಿಸುತ್ತಾರೆ. ಶ್ರವಣ ನಕ್ಷತ್ರದಲ್ಲಿ ನೀಡುವ ಔಷಧಿ ಸೇವಿಸಿದರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಪ್ರಾಪ್ತಿ ಆಗುತ್ತದೆ ಎನ್ನಲಾಗುತ್ತಿದ್ದು, ಸುಮಾರು ವರ್ಷಗಳಿಂದ ದೇವಸ್ಥಾನದಲ್ಲಿ ಈ ರೀತಿಯ ಔಷಧಿ ನೀಡಲಾಗುತ್ತಿದೆ. ಅರ್ಚಕರ ಕುಟುಂಬದವರು ಸುಮಾರು ವರ್ಷಗಳಿಂದ ಈ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜ ಸಂಘಟನೆ ನಡೆಯುತ್ತಿದೆ, ಆಗಾಗ ವಿಘ್ನಗಳು ನಡೆಯುತ್ತವೆ, ಅದು ಸಾಮಾನ್ಯ: ಗೋಪಾಲ್ ನಾಗರಕಟ್ಟೆ
Advertisement
ವಿಜಯದಶಮಿ ದಿನದಂದು ಸಂತಾನ ಭಾಗ್ಯ ಇಲ್ಲದವರಿಗೆ ನೀಡುವ ಔಷಧಿ ಪಡೆಯಲು ಸಾವಿರಾರು ಸಂಖ್ಯೆಯ ಮಹಿಳೆಯರು ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಮಾತ್ರ ನೀಡುವ ಔಷಧಿ ಸೇವಿಸಿ ಹೋಗುತ್ತಾರೆ. ಔಷಧಿ ಸೇವಿಸಿದ 1 ವರ್ಷದಲ್ಲಿ ಶಾಂತೇಶ ಸಂತಾನ ಭಾಗ್ಯ ಕರುಣಿಸುತ್ತಾನೆ ಎನ್ನುವ ನಂಬಿಕೆ ಬಲವಾಗಿದೆ. ಸುಮಾರು ವರ್ಷಗಳಿಂದ ಸಾವಿರಾರು ಜನ ಮಕ್ಕಳಿಲ್ಲದವರು ಇಲ್ಲಿ ಔಷಧಿ ಸೇವಿಸಿದ ನಂತರ ಮಕ್ಕಳಾದ ನಿದರ್ಶನಗಳಿವೆ.
Advertisement
ಮಕ್ಕಳ ಭಾಗ್ಯ ಪಡೆದವರು ದೇವಸ್ಥಾನಕ್ಕೆ ಮಕ್ಕಳ ಸಮೇತ ಬಂದು ಪೂಜೆ ಸಲ್ಲಿಸುತ್ತಾರೆ. ತಾವು ಬೇಡಿಕೊಂಡಂತೆ ಮತ್ತು ತಮ್ಮ ಕೈಲಾದಂತೆ ಬೆಳ್ಳಿಯ ತೊಟ್ಟಿಲು ಸೇರಿದಂತೆ ವಿವಿಧ ರೀತಿಯ ಹರಕೆ ತೀರಿಸುತ್ತಾರೆ. ಔಷಧಿ ಸೇವನೆ ನಂತರ ದೇವಸ್ಥಾನದಲ್ಲಿ ನೀಡುವ ತೆಂಗಿನಕಾಯಿಯನ್ನು ಮಹಿಳೆಯರು 1 ವರ್ಷ ದೇವರ ಜಗುಲಿ ಮೇಲಿಟ್ಟು ಪೂಜೆ ಮಾಡಿದರೆ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಇದನ್ನೂ ಓದಿ: ದಸರಾ ರಜೆ ಮುಗಿಸಿ ಬೆಂಗಳೂರಿನತ್ತ ಜನ – ಬಸ್ ತುಂಬಿ ಟಾಪ್ ಮೇಲೂ ಪ್ರಯಾಣ