ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿರುವ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೇ ವೇಳೆ ದೇವಾಲಯದ ಪ್ರವೇಶಿಸಿದ ಮಹಿಳೆಯರ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಿಡಿಕಾರಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಸಂತೋಷ್ ಅವರು, ದೇವಾಲಯ ಪ್ರವೇಶಿಸಿರುವ ಮಹಿಳೆಯರು, ನಿಜವಾದ ಅಯ್ಯಪ್ಪ ಭಕ್ತರಲ್ಲ. ಹಿಂದೂ ಪರಂಪರೆ ಹಾಗೂ ಧರ್ಮ ಒಪ್ಪುವವರು ಅಲ್ಲ. ಅಲ್ಲದೇ ಮಹಿಳೆಯರ ಪರ ಪ್ರಾಮಾಣಿಕವಾಗಿ ವಾದವನ್ನು ಮಂಡಿಸುವವರು ಅಲ್ಲ ಎಂದು ತಿಳಿಸಿದ್ದಾರೆ.
Advertisement
#BlackDayforHindus Look at the support by Pinarayi Govt to two CPIML activists …,#SaveSabarimala pic.twitter.com/8jOQlJ6g32
— B L Santhosh (@blsanthosh) January 2, 2019
Advertisement
ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರು ಮಾವೋವಾದಿಗಳಾಗಿದ್ದು, ಭಾರತದ ವೈವಿಧ್ಯತೆಯ ವಿರೋಧಿಗಳು ಹಾಗೂ ಧರ್ಮವನ್ನು ಅಫೀಮು ಎನ್ನುವವರಾಗಿದ್ದಾರೆ. ಅಲ್ಲದೇ ಭಾರತವನ್ನು ಒಡೆಯುವವರು ಮತ್ತು ಸರ್ವಾಧಿಕಾರಿ ಪ್ರಿಯರು ಎಂದು ಪ್ರಶ್ನೋತ್ತರ ಮಾದರಿಯಲ್ಲಿ ಟ್ವೀಟ್ ಮಾಡಿದ್ದಾರೆ.
Advertisement
ಮತ್ತೊಂದು ಟ್ವೀಟ್ ನಲ್ಲಿ ಶಬರಿಮಲೆ ದೇವಾಲಯದ ಒಳಗೆ ಸಿಪಿಐ(ಎಂ) ಕಾರ್ಯಕರ್ತರು ಪ್ರವೇಶ ಮಾಡಲು ಕೇರಳ ಸರ್ಕಾರ ಬೆಂಬಲ ನೀಡಿದೆ ಎಂದು ಆರೋಪಿಸಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಐತಿಹಾಸಿಕ ಎಂಬಂತೆ ಬಿಂಬಿಸಿರುವ ಮಾಧ್ಯಮಗಳ ವಿರುದ್ಧವೂ ಸಂತೋಷ್ ಅವರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಕೊನೆಗೂ ಶಬರಿಮಲೆ ದೇವಾಲಯಕ್ಕೆ ಇಬ್ಬರು ಮಹಿಳೆಯರು ಎಂಟ್ರಿ!
Advertisement
— B L Santhosh (@blsanthosh) January 2, 2019
ಅಲ್ಲದೇ ದೇವಾಲಯ ಪ್ರವೇಶ ಮಾಡಿರುವ ಮಹಿಳೆಯರಿಗೆ ಭ್ರದತೆ ನೀಡುವ ದೃಷ್ಟಿಯಿಂದ ಕೇರಳ ಪೊಲೀಸರು ಬೇರೆ ಅವರನ್ನು ಕರೆದ್ಯೊಯುತ್ತಿರುವ ವಿಡಿಯೋ ಟ್ವೀಟ್ ಮಾಡಿ, ಇದು ಮಹಿಳೆಯರಿಗೆ ನೀಡಿರುವ ಹಕ್ಕು ಮತ್ತು ಸಮಾನತೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯ ಪ್ರವೇಶಿಸಿದ ಮಹಿಳೆಯರು ಸಿಪಿಎಂ ಕಾರ್ಯಕರ್ತೆಯರಾಗಿದ್ದಾರೆ ಎಂದು ಹೇಳಿ #SaveSabarimala, #BlackDayforHindus ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನು ಓದಿ: ಮಹಿಳೆಯರ ಪ್ರವೇಶದಿಂದ ಮುಚ್ಚಲಾಗಿದ್ದ ಶಬರಿಮಲೆ ದೇವಾಲಯ ಮತ್ತೆ ಓಪನ್
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv