ಬೆಳಗಾವಿ: ಬಿಜೆಪಿಯ (BJP) ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಮಹನೀಯರ ಜೀವನ ಚರಿತ್ರೆ ಬಗ್ಗೆ ಸುಳ್ಳು ಹೇಳಲು ಹೊರಟಿದೆ. ಕಾಲ್ಪನಿಕ ಕಥೆಗಳ ಮೂಲಕ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ್ (C.N.Ashwath Narayan) ಹಾಗೂ ಶೋಭಾ ಕರಂದ್ಲಾಜೆ (Shobha karandlaje) ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡಲು ಹೊರಟಿದ್ದಾರೆ. ಟಿಪ್ಪು ಸಾಧನೆ ಬಗ್ಗೆ ಇತಿಹಾಸವೇ ಇದೆ. ಇದರ ಕುರಿತು ಸಾಕಷ್ಟು ಗ್ರಂಥಗಳಿವೆ. ಈಗ ಉರಿಗೌಡ, ನಂಜೇಗೌಡ ಬಗ್ಗೆ ಚಿತ್ರ ಮಾಡುತ್ತಿದ್ದಾರೆ. ಒಕ್ಕಲಿಗರ ಮತ ಸೆಳೆಯಲು ಮತ್ತು ಅವರ ಭಾವನೆಗಳಿಗೆ ಧಕ್ಕೆ ತರಲು ಬಿಜೆಪಿಯವರು ಮುಂದಾಗಿದ್ದಾರೆ. ನಿರ್ಮಲಾನಂದ ಸ್ವಾಮೀಜಿ (Nirmalanandanatha Swamiji) ಇದರ ಬಗ್ಗೆ ಹೋರಾಟ ಮಾಡಬೇಕು. ಸಾಹಿತಿಗಳು, ಹೋರಾಟಗಾರರು ಹಾಗೂ ಎಲ್ಲಾ ಸಮಾಜಗಳ ಮಠಾಧೀಶರು ಇದಕ್ಕೆ ಕೈಜೋಡಿಸಬೇಕು ಎಂದರು. ಇದನ್ನೂ ಓದಿ: ಶೋಭಾ ಡೆವಲಪರ್ಸ್ ಕಚೇರಿಗೆ ಐಟಿ ಶಾಕ್
Advertisement
Advertisement
ಹೆಸರುಗಳನ್ನು ಬದಲಾವಣೆ ಮಾಡಲು ಸಾಧ್ಯವೇ? ಬಿಜೆಪಿಯ ವಾಟ್ಸಪ್ ಯುನಿವರ್ಸಿಟಿ ಹೊಸ ಇತಿಹಾಸ ಬರೆಯಲು ಯತ್ನಿಸುತ್ತಿದೆ. ಇದನ್ನು ಖಂಡಿಸಲು ನಿರ್ಮಲಾನಂದ ಸ್ವಾಮೀಜಿ ಸಭೆ ನಡೆಸಬೇಕು. ಯಾವ ನಿರ್ದೇಶಕ ಬೇಕಾದರೂ ಬರಲಿ, ಅವರನ್ನು ಎದುರಿಸಲು, ಉತ್ತರ ಕೊಡಲು ನಾವು ಸಿದ್ಧರಾಗಿದ್ದೇವೆ. ಒಕ್ಕಲಿಗ ಸಮಾಜಕ್ಕೆ ಅಗೌರವ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ನಾವು ಹೋರಾಟ ಮಾಡುತ್ತೇವೆ, ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ
Advertisement
ಬಿಜೆಪಿ ಕಾಲ್ಪನಿಕ ಕಥೆ ಮೂಲಕ ತಪ್ಪು ಸಂದೇಶ ರವಾನಿಸುತ್ತಿದೆ. ಯಾವುದೋ ಒಂದು ಪುಸ್ತಕದಲ್ಲಿ ಈ ಬಗ್ಗೆ ಸಣ್ಣ ಉಲ್ಲೇಖ ಇದೆ. ಸಂಶೋಧನೆ ಮೂಲಕ ಇತಿಹಾಸ ಬರೆದಿರುತ್ತಾರೆ, ಸಂಶೋಧನೆ ಮೂಲಕವೇ ಇತಿಹಾಸ ಇರಬೇಕು. ಉರಿಗೌಡ-ನಂಜೇಗೌಡ ಹೆಸರನ್ನು ಇಷ್ಟು ದಿನ ಎಲ್ಲಿ ಕೇಳಿದ್ದೀರಿ? ಬಿಜೆಪಿ ನಾಯಕರ ಮೇಲೆ ಮೊದಲು ಕೇಸ್ ಹಾಕಬೇಕು. ಯಾರು ಪ್ರಚೋದನೆ ಮಾಡುತ್ತಿದ್ದಾರೆ ಅವರ ಮೇಲೆ ಕೇಸ್ ಹಾಕಬೇಕು. ಪೇ ಸಿಎಂ ಅಭಿಯಾನ ಆದಾಗ ನನ್ನ ಮತ್ತು ಸಿದ್ದರಾಮಯ್ಯ (Siddaramaiah) ಮೇಲೆ ಕೇಸ್ ಹಾಕಿದ್ದರು. ಈಗೇಕೆ ಸೈಲೆಂಟ್ ಆಗಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಭೂಮಿ ಪೂಜೆ
Advertisement
ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ್ ಮತ್ತು ಸಿಟಿ ರವಿಯವರು (C.T.Ravi) ಒಕ್ಕಲಿಗ ಹಾಗೂ ಹಿಂದೂ ವಿರೋಧಿಗಳು. ನಿರ್ಮಲಾನಂದ ಸ್ವಾಮೀಜಿ ಯಾವ ಡೈರೆಕ್ಟರನ್ನು ಕರೆದು ಮಾತನಾಡಬೇಡಿ. ಕರೆದರೆ ಒಕ್ಕಲಿಗ ಸಮಾಜ ತಲೆ ತಗ್ಗಿಸಿದಂತೆ ಆಗುತ್ತದೆ. ನಾನೂ ಕೂಡ ಸ್ವಾಮೀಜಿಗೆ ಪತ್ರಬರೆದು ಮನವಿ ಮಾಡುತ್ತೇನೆ. ಈ ಹೋರಾಟದ ನಾಯಕತ್ವ ನಿರ್ಮಲಾನಂದ ಸ್ವಾಮೀಜಿಯವರು ವಹಿಸಿಕೊಳ್ಳಬೇಕು. ಎಲ್ಲಾ ಸಮಾಜದ ಸ್ವಾಮೀಜಿಗಳು ಇದಕ್ಕೆ ಕೈಜೋಡಿಸಬೇಕು. ಒಕ್ಕಲಿಗ ಸ್ವಾಮೀಜಿ ಮೊದಲು ಹೋರಾಟ ಮಾಡಲಿ. ಬಳಿಕ ಪಕ್ಷದ ಕಡೆಯಿಂದ ಹೋರಾಟ ಮಾಡಲು ಯೋಚಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಫೋಟೋ ಸ್ಟೇಟಸ್ ಹಾಕಿದ್ದ ಯವಕನಿಗೆ ಹಲ್ಲೆ – ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸ್
ನಿರ್ಮಲಾನಂದ ಸ್ವಾಮೀಜಿಯವರನ್ನು ಮುನಿರತ್ನ (Munirathna) ಭೇಟಿ ಮಾಡಿ ಮಾತುಕತೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಹಾಗೂ ಮುನಿರತ್ನ ಸಭೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಈ ಚಿತ್ರ ಆಗಬಾರದೆಂದು ಸ್ವಾಮೀಜಿಗೆ ನಾನು ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್ – ಸಿನಿಮಾ ಮಾಡಲ್ಲ ಎಂದ ಮುನಿರತ್ನ
ಬೆಳಗಾವಿಯಲ್ಲಿ (Belagavi) ರಾಹುಲ್ ಗಾಂಧಿ (Rahul Gandhi) ಸಮಾವೇಶದ ಕುರಿತು ಮಾತನಾಡಿದ ಅವರು, ಭಾರತ ಜೋಡೋ ಯಾತ್ರೆ ಬಳಿಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಯುವ ಕ್ರಾಂತಿ ಸಮಾವೇಶ ನಡೆಸುತ್ತಿದ್ದಾರೆ. ಇಂದು ಕಾಂಗ್ರೆಸ್ಸಿಗೆ (Congress) ಐತಿಹಾಸಿಕ ಕ್ಷಣ. ದೇಶ ಹಾಗೂ ರಾಜ್ಯದ ಬದಲಾವಣೆಗೆ ಯುವಕರು ಎಚ್ಚರಿಕೆ ವಹಿಸಬೇಕು. ಮಹಿಳೆಯರು, ಯುವಕರು ಒಗ್ಗಟ್ಟಾದಾಗ ಬದಲಾವಣೆ ಸಾಧ್ಯವಾಗುತ್ತದೆ. ಮಹಿಳೆಯರು, ಯುವಕರಿಗೆ ಜಾಗೃತಿಯ ಅಗತ್ಯವಿದೆ. ಅದಕ್ಕಾಗಿ ರಾಹುಲ್ ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಕಿತ್ತೂರು ಕರ್ನಾಟಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಹವಾ
ಪ್ರಿಯಾಂಕಾ ಗಾಂಧಿ (Priyanka Gandhi Vadra) ಬೆಂಗಳೂರಿಗೆ (Bengaluru) ಬಂದು ಗೃಹಲಕ್ಷ್ಮಿ ಯೋಜನೆ ಘೋಷಿಸಿದರು. ಅದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರ ಕೂಡ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಯೋಜನೆಗೆ ಮುಂದಾಗಿದೆ. ನಮ್ಮ ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ, ಮಾಡಲಿ. ಚುನಾವಣೆಯಲ್ಲಿ 500ಕ್ಕೂ ಅಧಿಕ ಭರವಸೆಯನ್ನು ಪ್ರಣಾಳಿಕೆಯಲ್ಲಿ ಹಾಕಿದ್ದಾರೆ. ನಾಲ್ಕು ಬಜೆಟ್ ಮಂಡಿಸುವ ಅವಕಾಶ ಇದ್ದರೂ ಬಹುತೇಕ ಯೋಜನೆ ಜಾರಿಯಾಗಲಿಲ್ಲ. ಕಾಂಗ್ರೆಸ್ ಯೋಜನೆ ನೋಡಿ ಬಿಜೆಪಿ ಸರ್ಕಾರ ನಮ್ಮನ್ನು ಫಾಲೋ ಮಾಡುತ್ತಿದೆ. ಗೃಹಲಕ್ಷ್ಮಿಗೆ ಪರ್ಯಾಯವಾಗಿ ಸ್ತ್ರಿಶಕ್ತಿ ಯೋಜನೆ, ಯುವಶಕ್ತಿ ಯೋಜನೆಗೆ ಬಿಜೆಪಿ ಮುಂದಾಗಿದೆ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಮತ್ತೊಂದು ಶಾಕ್
ನಾವು ಜನಪರ ಯೋಜನೆ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಬಿಜೆಪಿ ಭ್ರಷ್ಟಾಚಾರದ (Corruption) ಬಗ್ಗೆ ಚಿಂತೆ ಮಾಡುತ್ತದೆ. ಬಿಜೆಪಿ ದೇಶದಲ್ಲೇ ಅತಿ ಭ್ರಷ್ಟ ಸರ್ಕಾರವಾಗಿದೆ. ಮಂತ್ರಿಗಳು, ಶಾಸಕರು ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದ್ದು, ಯುವಕರು ರೋಸಿ ಹೋಗಿದ್ದಾರೆ. ಅಧಿಕಾರ ಇದ್ದಾಗ ಮಾಡದ ಬಿಜೆಪಿಯವರು ಈಗ ಪ್ರಣಾಳಿಕೆಯಲ್ಲಿ ಹಾಕುತ್ತಿದ್ದಾರೆ. ಯುವಕರು, ಮಹಿಳೆಯರನ್ನು ಸೆಳೆಯಲು ಭರವಸೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು. ಇದೇ ವೇಳೆ ಕನಕಪುರಕ್ಕೆ (Kanakapura) ಬರುತ್ತೇನೆ ಎಂಬ ರಮೇಶ್ ಜಾರಕಿಹೊಳಿ (Ramesh Jarakiholi) ವಿಚಾರಕ್ಕೆ ಐ ವಿಶ್ ಹಿಮ್ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಆಡಿಯೋದಲ್ಲಿ ಶಿವಲಿಂಗೇಗೌಡ ಹೇಳಿರುವುದು ಸುಳ್ಳು ಎಂದು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ – ರೇವಣ್ಣ ಸವಾಲು