ನವದೆಹಲಿ: ಇತ್ತಿಚೇಗೆ ಅನುಮಾನಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಮೃತ ದೇಹದ ಮೇಲೆ ಹಲವು ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿದ ನಂತರ ಗೋವಾ ಪೊಲೀಸರು ಸೋನಾಲಿಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
ಆಗಸ್ಟ್ 22ರಂದು ಫೋಗಟ್ ಗೋವಾಕ್ಕೆ ಆಗಮಿಸಿದಾಗ ಅವರ ಜೊತೆಗಿದ್ದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ ಆರೋಪಿಗಳೆಂದು ಪೊಲೀಸರು ಬಂಧಿಸಿದ್ದಾರೆ. ಸೋನಾಲಿ ಸಾವಿನ ಕುರಿತಾಗಿ ಆಕೆಯ ಸಹೋದರ ರಿಂಕು ಧಾಕಾ ಅನುಮಾನ ವ್ಯಕ್ತಪಡಿಸಿ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಸೊನಾಲಿ ಫೋಗಟ್ ಆತ್ಮಹತ್ಯೆ ಪ್ರಕರಣ- ಇಬ್ಬರು ಸಹಚರರ ವಿರುದ್ಧ ಕೇಸ್
ಆ ಬಳಿಕ ಸೋನಾಲಿ ಫೋಗಟ್ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಫೋರೆನ್ಸಿಕ್ ತಜ್ಞರ ಸಮಿತಿಯು ಶವವನ್ನು ಶವಪರೀಕ್ಷೆ ನಡೆಸಿತು. ಈ ವರದಿಯಲ್ಲಿ ಹರಿತವಾದ ಆಯುಧದಿಂದ ಇರಿದಿರುವ ಗಾಯದ ಗುರುತು ಪತ್ತೆಯಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹಾಡಹಗಲೇ ಬಾಲಕಿ ಕಿಡ್ನ್ಯಾಪ್‍ಗೆ ಯತ್ನ
Haryana | After the last rites are conducted, the family members will decide whether or not we want a CBI probe into her death. We are sure that it was a murder. We are satisfied with the probe done so far: Rinku, Sonali Phogat's brother, in Hisar pic.twitter.com/pdxdrgz7z6
— ANI (@ANI) August 26, 2022
ಸೊನಾಲಿ ಫೋಗಟ್ 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‍ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು. ಟಿಕ್ ಟಾಕ್‍ನಲ್ಲಿ ಜನಪ್ರಿಯರಾಗಿದ್ದ ಅವರು, 14ನೇ ಆವೃತ್ತಿಯ `ಬಿಗ್‍ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.