DistrictsKarnatakaLatestMain PostVijayapura

ಹಾಡಹಗಲೇ ಬಾಲಕಿ ಕಿಡ್ನ್ಯಾಪ್‍ಗೆ ಯತ್ನ

ವಿಜಯಪುರ: ಹಾಡಹಗಲೇ 8 ವರ್ಷದ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೋರ್ವ ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಘಟನೆ ವಿಜಯಪುರದ ಮುಕುಂದ ನಗರದಲ್ಲಿ ನಡೆದಿದೆ.

ಬಾಲಕಿಯನ್ನು 8 ವರ್ಷದ ಸೌಂದರ್ಯ ಬಿರಾದಾರ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಸೌಂದರ್ಯ ಬಿರಾದಾರ ಜೋರಾಗಿ ಕಿರುಚಾಡಿದ್ದರಿಂದ, ಅಲ್ಲಿಯೇ ಇದ್ದ ಸ್ಥಳೀಯರು ಧಾವಿಸುತ್ತಿದ್ದಂತೆ, ಜನರನ್ನು ನೋಡಿ ಭಯಭೀತನಾದ ವ್ಯಕ್ತಿ ಸ್ಥಳದಿಂದ ಕಾಲ್ಕತ್ತಿದ್ದಾನೆ. ಇದನ್ನೂ ಓದಿ: ಚಿಕ್ಕಮ್ಮನ ಮಗಳು, ಸ್ವಂತ ಅಜ್ಜಿಯ ಮೇಲೆಯೇ ಅತ್ಯಾಚಾರ – ಇಬ್ಬರು ಸಹೋದರರು ಅರೆಸ್ಟ್

ಗುರುವಾರ ಬೆಳಗಿನ ಜಾವ ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಓಡಿ ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸಿರೋ ಪುನೀತ್ ಉಪಗ್ರಹ ಶೀಘ್ರದಲ್ಲೇ ಉಡಾವಣೆ

Live Tv

Leave a Reply

Your email address will not be published.

Back to top button