ವಿಜಯಪುರ: ಬಿಜೆಪಿ ಹಾಲಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ಲೋಕಸಭಾ ಚುನಾವಣೆಯಲ್ಲಿ ವಿಜಯಪುರ (Vijayapura) ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸಿದ್ದಾರೆ.
ಜಿಗಜಿಣಗಿ ಒಟ್ಟು 6,72,781 ಹಾಗೂ ಕಾಂಗ್ರೆಸ್‌ನ (Congress) ರಾಜು ಅಲಗೂರ್ (Raju Alagur) 5,95,552 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಸಂಸದ 77,229 ಮತಗಳ ಅಂತರದಿಂದ ಗೆದ್ದಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಕೈ ಹಿಡಿದ ಮಹಾದೇವಪುರ – ಸತತ 4ನೇ ಬಾರಿ ಪಿಸಿ ಮೋಹನ್‌ಗೆ ಜಯ
ವಿಜಯಪುರ ಕ್ಷೇತ್ರ ಬಿಜೆಪಿ ಭದ್ರಕೋಟೆ. 2009 ರಿಂದ ಸತತವಾಗಿ ರಮೇಶ್ ಜಿಗಜಿಣಗಿ ಗೆದ್ದು ಬೀಗಿದ್ದಾರೆ. 2019 ರಲ್ಲಿ ಜೆಡಿಎಸ್‌ನ ಡಾ. ಸುನಿತಾ ಚವ್ಹಾಣ ಅವರನ್ನು 2,56,526 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಚುನಾವಣೆ ಹೊತ್ತಲ್ಲೇ ರಮೇಶ್ ಜಿಗಜಿಣಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: Elections Results: ಶಿವಮೊಗ್ಗದಲ್ಲಿ 4ನೇ ಬಾರಿಗೆ ರಾಘವೇಂದ್ರ ಜಯಭೇರಿ – ಠೇವಣಿ ಕಳೆದುಕೊಂಡ ಈಶ್ವರಪ್ಪ
ಇಲ್ಲಿ ಬಿಜೆಪಿ ಪಕ್ಷದ ಪಾರುಪತ್ಯ ಮಾತ್ರ ನಡೆಯುತ್ತದೆ. ಕಾಂಗ್ರೆಸ್‌ನಲ್ಲಿ ಯಾರದೇ ಪಾರುಪತ್ಯ ಇಲ್ಲಿ ಲೆಕ್ಕಕ್ಕಿಲ್ಲ. ಕೇವಲ ಪ್ರಧಾನಿ ಅಭ್ಯರ್ಥಿ ಮೇಲೆ ಮತ ಚಲಾವಣೆ ಆಗುತ್ತೆ. ಆದ್ದರಿಂದ ಈ ಬಾರಿಗೂ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.