ನವದೆಹಲಿ: ಬಿಜೆಪಿಯ ದ್ವೇಷದ ರಾಜಕಾರಣವು ಭಾರತಕ್ಕೆ ಹಾನಿಕಾರಕವಾಗಿದೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಇದು ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾಜಿಕ ಶಾಂತಿ ಇಲ್ಲದೇ ದೇಶೀಯ ಮತ್ತು ವಿದೇಶಿ ಕೈಗಾರಿಕೆಗಳು ನಡೆಯಲು ಸಾಧ್ಯವಿಲ್ಲ. ಈ ದ್ವೇಷವನ್ನು ಸಹೋದರತ್ವದಿಂದ ಎದುರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
Advertisement
Advertisement
ಬಿಜೆಪಿ ಆಡಳಿತದಲ್ಲಿ ನಿರುದ್ಯೋಗ, ತೆರಿಗೆ ಸುಲಿಗೆ, ಹಣದುಬ್ಬರ ಮತ್ತು ದ್ವೇಷದ ರಾಜಕಾರಣ ಎಂಬ ನಾಲ್ಕು ಆಯ್ಕೆಗಳನ್ನು ನೀಡಿ ರಾಹುಲ್ ಗಾಂಧಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಗೆ 347, 396 ಮಂದಿ ಪ್ರತಿಕ್ರಿಯಿಸಿದ್ದು, ಶೇ.35 ರಷ್ಟು ಜನರು ದ್ವೇಷದ ರಾಜಕಾರಣ ಎಂಬ ಆಯ್ಕೆ ಮಾಡಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
Advertisement
मैं भी यही मानता हूँ कि भाजपा की नफ़रत भरी राजनीति देश के लिए बेहद हानिकारक है।
और ये नफ़रत ही बेरोज़गारी के लिए भी ज़िम्मेदार है। देशीय व विदेशी उद्योग बिना सामाजिक शांति के नहीं चल सकते।
रोज़ अपने आस-पास बढ़ती इस नफ़रत को भाईचारे से हराएँगे- क्या आप मेरे साथ हैं?#NoHate https://t.co/Bzc7IMruXQ
— Rahul Gandhi (@RahulGandhi) January 16, 2022
Advertisement
ಸರ್ಕಾರದ ಎರಡನೇ ಅತಿದೊಡ್ಡ ವೈಫಲ್ಯವೆಂದರೆ ನಿರುದ್ಯೋಗ ಸಮೀಕ್ಷೆಯಲ್ಲಿ ಶೇ.28ರಷ್ಟು ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ನಂತರ 17.2 ರಷ್ಟು ಮಂದಿ ತೆರಿಗೆ ಸುಲಿಗೆ ಮತ್ತು ಶೇ. 19.28ರಷ್ಟು ಮಂದಿ ಹಣದುಬ್ಬರ ಎಂದು ಉತ್ತರಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ನ್ಯೂನತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ
ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ, ಅದನ್ನು ಪರಿಹರಿಸುವುದು ಪ್ರಧಾನ ಮಂತ್ರಿಯ ಜವಾಬ್ದಾರಿಯಾಗಿದೆ. ದೇಶದ ಜನತೆ ಉತ್ತರ ಕೇಳುತ್ತಿದ್ದಾರೆ, ಕ್ಷಮಾಪಣೆ ಕೇಳುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.