ಬೆಂಗಳೂರು: ಶಾಸಕ ಯತ್ನಾಳ್ (Bsanagouda Patil Yatnal) ಇತ್ತೀಚಿನ ಹೇಳಿಕೆಗಳಿಂದ ಕೊನೆಗೂ ಬಿಜೆಪಿ (BJP) ಹೈಕಮಾಂಡ್ ಎಚ್ಚೆತ್ತಿದೆ. ಮುರುಗೇಶ್ ನಿರಾಣಿ (Murugesh R Nirani) ವಿರುದ್ಧ ಯತ್ನಾಳ್ ಬಳಸಿದ ಪಿಂಪ್ ಪದದಿಂದಾಗಿ ಭಾರೀ ಮುಜುಗರಕ್ಕೆ ಒಳಗಾಗಿರುವ ಹೈಕಮಾಂಡ್ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಬಿಜೆಪಿಯ ಶಿಸ್ತು ಸಮಿತಿ ನೋಟಿಸ್ (Show Cause Notice) ಕೊಟ್ಟಿದ್ದು, 10 ದಿನಗಳ ಒಳಗೆ ವಿವರಣೆ ನೀಡುವಂತೆ ಸೂಚಿಸಿದೆ. 2 ದಿನಗಳ ಹಿಂದೆಯಷ್ಟೇ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ
Advertisement
Advertisement
ಈ ಮಧ್ಯೆ, ಸೂಕ್ತಕಾಲದಲ್ಲಿ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ. ಟಿಕೆಟ್ ನೀಡುವಾಗ ಎಲ್ಲಾ ವಿಚಾರ ಪರಿಗಣನೆ ಆಗುತ್ತದೆ. ಜನನೂ ಪಾಠ ಕಲಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k