-ಅಕ್ರಮ ಬಾಂಗ್ಲಾ ವಲಸಿಗರು ಬೆಂಗ್ಳೂರಿಗೆ ಬಂದಿದ್ರೆ ಅದಕ್ಕೆ ಕೇಂದ್ರವೇ ಹೊಣೆ
ಬೆಂಗಳೂರು: ಇಲ್ಲಿನ ಆಸ್ತಿಗಳನ್ನ ಅಡಮಾನ ಇಟ್ಟಿದ್ದು ಬಿಟ್ಟರೆ ಬೆಂಗಳೂರಿಗೆ ಬಿಜೆಪಿ (BJP) ಸಾಧನೆ ಏನು ಇಲ್ಲ. 5 ಪಾಲಿಕೆಯಲ್ಲಿ ಕಾಂಗ್ರೆಸ್ (Congress) ಗೆಲ್ಲಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು (Bengaluru) ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚು ಕೊಡುಗೆ ಕೊಟ್ಟಿದೆ. ಬೆಂಗಳೂರಿಗೆ ಏರ್‌ಪೋರ್ಟ್, ಮೆಟ್ರೋ ತಂದಿದ್ದೇವೆ. ಬಿಜೆಪಿಯವರು 14 ಕಟ್ಟಡಗಳನ್ನು ಅಡ ಇಟ್ಟು ಹೋಗಿದ್ದರು. 6,000 ಕೋಟಿ ರೂ. ಸಾಲ ಇಟ್ಟು ಹೋಗಿದ್ದರು. ಇದೇ ಅವರ ಸಾಧನೆ. ನಾವು ಸಾಲ ತೀರಿಸಿ ಕಟ್ಟಡಗಳನ್ನ ಬಿಡಿಸಿಕೊಂಡಿದ್ದೇವೆ. ಟ್ರಾಫಿಕ್ ಕಡಿಮೆ ಆಗೊದಕ್ಕೆ 50 ಕಿ.ಮಿ ಫ್ಲೈ ಒವರ್ ಮಾಡುತ್ತಿದ್ದೇವೆ. ಟನಲ್ ರೋಡ್ ಬಗ್ಗೆ ಬಿಜೆಪಿಯವರು ಟೀಕೆ ಮಾಡ್ತಾರೆ. ಆದರೆ ಮುಂಬೈನಲ್ಲಿ ಎರಡು ಟನಲ್ ರಸ್ತೆ ಪ್ರಾರಂಭ ಮಾಡಿದ್ದಾರೆ. ಕಸದ ಸಮಸ್ಯೆ ಇದೆ, ಅದಕ್ಕಾಗಿ ಹಲವು ಯೋಜನೆ ಮಾಡ್ತಿದ್ದೇವೆ. ಮಹಿಳೆಯರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸಕಲೇಶಪುರದ ಮೂಗಲಿಯಲ್ಲಿ ಆನೆ ದಾಳಿಗೆ ಮಹಿಳೆ ಸಾವು – ಈಶ್ವರ ಖಂಡ್ರೆ ಸಂತಾಪ
ಜಿಬಿಎ ಚುನಾವಣೆ (GBA Election) ಬಗ್ಗೆ ಮಾತನಾಡಿದ ಅವರು, ಜಿಬಿಎ ಚುನಾವಣೆಗೆ 5 ಪಾಲಿಕೆಗಳು, ದಕ್ಷಿಣದ್ದು ಒಂದು ಮೀಟಿಂಗ್ ಆಗಿದೆ. ಮೀಸಲಾತಿ ಆಗಿರಲಿಲ್ಲ, ಆದರೂ ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿಗಳ ಅರ್ಜಿಯನ್ನ ಕರೆದಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಜನರಲ್‌ನಲ್ಲಿ ಬಹಳ ಅರ್ಜಿಗಳು ಬಂದಿವೆ. ಇನ್ನೂ ಟೈಮ್ ಇದೆ ಏಪ್ರಿಲ್‌ಗೆ ಎಕ್ಸಾಂಗಳು ಮುಗಿದಿರುತ್ತದೆ. ಜೂನ್‌ನಲ್ಲಿ ಮಳೆ ಇದೆ. ಹಾಗಾಗಿ ಮೇ ತಿಂಗಳಲ್ಲೇ ಎಲ್ಲಾ ಮುಗಿಯುತ್ತೆ. ಜನ ಯೋಚನೆ ಮಾಡಿ ಮತ ಹಾಕಿದ್ರೆ, ಐದು ಪಾಲಿಕೆ ನಾವೇ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿ ಸವಾಲು ಆಗಲ್ವಾ ಎಂಬ ವಿಚಾರವಾಗಿ ಮಾತನಾಡಿ, ಅವರು ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಟೀಚರ್ಸ್ ಎಲೆಕ್ಷನ್‌ನಲ್ಲಿ ಮೈತ್ರಿ ಇದ್ದರೂ ನಾವು ಗೆದ್ವಿ. 6ರಲ್ಲಿ ನಾವು 4 ಸ್ಥಾನ ಗೆದ್ದಿದ್ದೇವೆ. ಅವರು ಎರಡು ಮಾತ್ರ ಸ್ಥಾನ ಗೆದ್ದಿದ್ದಾರೆ. ಜಿಬಿಎದಲ್ಲೂ ನಾವು ಗೆಲ್ತೀವಿ ಎಂದು ಹೇಳಿದ್ದಾರೆ.
ನಾಯಕತ್ವ ಫೈಟ್ ನಡುವೆ ಚುನಾವಣೆ ವಿಚಾರಕ್ಕೆ ಮಾಧ್ಯಮಗಳು ಸುಮ್ಮನೆ ಇರೋದಕ್ಕೆ ಬಿಡಲ್ಲ. ನಮ್ಮ ಶಾಸಕರು ಮೈಕ್ ಹಿಡಿದಾಗ ಏನಾದರೂ ಮಾತಾಡ್ತಾರೆ. ನೀವು ಸುಮ್ಮನೆ ಇರಿ. ಸಿಎಂ-ಡಿಸಿಎಂ ರಾಹುಲ್ ಗಾಂಧಿ (Rahul Gandhi) ಭೇಟಿ ವಿಚಾರಕ್ಕೆ ರಾಹುಲ್ ಗಾಂಧಿ ಸಹಜವಾಗಿ ವಯನಾಡಿಗೆ ಹೋಗ್ತಿರುತ್ತಾರೆ. ವಯನಾಡು ಅವರ ಹಳೆ ಕ್ಷೇತ್ರ. ಮೈಸೂರಿಗೆ ಬಂದು ಹೋಗಬೇಕಲ್ವಾ, ಅದಕ್ಕೆ ಸಿಎಂ, ಡಿಸಿಎಂ ಹೋಗಿ ಮಾತಾಡ್ತಾರೆ ತಿಳಿಸಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರು ಬೆಂಗ್ಳೂರಿಗೆ ಬಂದಿದ್ರೆ ಅದಕ್ಕೆ ಕೇಂದ್ರವೇ ಹೊಣೆ:
ಕೋಗಿಲು (Kogilu Layout) ವಿಚಾರದಲ್ಲಿ ರೋಹಿಂಗ್ಯಾ ಮುಸ್ಲಿಮರು ಇದ್ದಾರೆ ಎಂದು ಬಿಜೆಪಿಯವರು ಹೇಳ್ತಾರೆ. ಎನ್‌ಐಎ ತನಿಖೆಗೆ ಕೊಡಬೇಕು ಅಂತಾರೆ. ಕೇಂದ್ರ ಸರ್ಕಾರ (Central Govt) ಏನು ಮಾಡ್ತಿದೆ. ನೇರವಾಗಿ ಬಾಂಗ್ಲಾದೇಶದಿಂದ ಬೆಂಗಳೂರಿಗೆ ಬರ್ತಾರಾ? ಕೇಂದ್ರ ಸರ್ಕಾರ ಸರಿಯಾಗಿ ಕೆಲಸ ಮಾಡದೇ ಇರೋದ್ರಿಂದ ಅವರು ಬಂದಿರಬಹುದು. ಕೇಂದ್ರ ಸರ್ಕಾರದ ವೈಫಲ್ಯವಿದೆ ಎಂದು ಕಿಡಿಕಾರಿದ್ದಾರೆ.
ಯಾರಿಗೆ ಅರ್ಹತೆ ಇದೆ ಅವರಿಗೆ ಮಾತ್ರ ಸೈಟ್ ಕೊಡ್ತಿದ್ದೇವೆ ಅಂತ ಸಿಎಂ, ಡಿಸಿಎಂ ಹಲವು ಕಾರ್ಯಕ್ರಮಗಳನ್ನ ಮಾಡಿ ಬರ್ತಿದ್ದಾರೆ. ಬಿಜೆಪಿಯವರು ಸಾಲ ಮಾಡೋದು ಬಿಟ್ಟು ಏನ್ ಮಾಡಿದ್ದಾರೆ. ಏನು ಮಾಡಿಲ್ಲ. ನಮ್ಮ ಟ್ಯಾಕ್ಸ್ ಹಣ ಬೇರೆ ರಾಜ್ಯಕ್ಕೆ ಕೊಡ್ತಾರೆ. 13 ಪೈಸೆ ಮಾತ್ರ ನಮಗೆ ಕೊಡ್ತಾರೆ. ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಕಾಂಬೋಡಿಯದಲ್ಲಿ ಸೈಬರ್ ವಂಚಕರಿಂದ ಟಾರ್ಚರ್ – ಮೂವರ ರಕ್ಷಣೆ, ಬೆಳಗಾವಿಗೆ ವಾಪಸ್

